➤ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಗ್ರಾ.ಪಂ.ಅಧ್ಯಕ್ಷೆ..!  

(ನ್ಯೂಸ್ ಕಡಬ)Newskadaba.com ಪುತ್ತೂರು,ಏ.23 ಪಾಣಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಭಾರತಿ ಭಟ್‌ 24 ವರ್ಷಗಳ ಬಳಿಕ ದ್ವಿತೀಯ ಪಿಯು ಪರೀಕ್ಷೆಯನ್ನು ಖಾಸಗಿಯಾಗಿ ಬರೆದು 421 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.

ಬಡ ಕುಟುಂಬದಲ್ಲಿ ಜನಿಸಿದ್ದ ಭಾರತಿ 1997-98ರಲ್ಲಿ 8ನೇ ತರಗತಿ ತೇರ್ಗಡೆ ಹೊಂದಿದ್ದು, ತಂದೆಯ ವಿಯೋಗದಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ.ಅನಂತರ ವೆಂಕಟ್ರಮಣ ಭಟ್‌ ಅವರನ್ನು ವಿವಾಹವಾಗಿ ಪಾಣಾಜೆಯಲ್ಲಿ ನೆಲೆಸಿರುವ ಅವರು 2020-21ನೇ ಸಾಲಿನ ಗ್ರಾ.ಪಂ. ಚುನಾವಣೆಯಲ್ಲಿ ಸದಸ್ಯೆಯಾಗಿ ಆಯ್ಕೆಯಾಗಿ 2 ವರ್ಷಗಳಿಂದ ಪಾಣಾಜೆ ಗ್ರಾ.ಪಂ. ಅಧ್ಯಕ್ಷೆಯಾಗಿದ್ದಾರೆ.

Also Read  ರಸ್ತೆಯಲ್ಲೇ ಡೀಸೆಲ್ ಸೋರಿಕೆ ➤ ಹಲವು ದ್ವಿಚಕ್ರ ವಾಹನಗಳು ಪಲ್ಟಿ..!

 

 

error: Content is protected !!
Scroll to Top