(ನ್ಯೂಸ್ ಕಡಬ)Newskadaba.com ಚಿಕ್ಕಮಗಳೂರು,ಏ.21 ಅಭ್ಯರ್ಥಿಗಳಿಂದ ಹಣ ಪಡೆದು ಗ್ರಾಮದ ಜನರಿಗೆ ನೀಡದೇ ತಾನೇ ಇಟ್ಟುಕೊಂಡಿದ್ದಾನೆ ಎನ್ನಲಾದ ಗ್ರಾಮದ ಮುಖಂಡನಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಬಾರಿಸಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಪಿರಮೇನಹಳ್ಳಿಯಲ್ಲಿ ನಡೆದಿದೆ. ಹಣ ನೀಡುತ್ತೇನೆ ಎಂದು ವಂಚಿಸಿದ ಮಂಜು ಎಂಬಾತನಿಗೆ ಕ್ಲಾಸ್ ತೆಗೆದುಕೊಂಡು ಮನಸ್ಸಿಗೆ ಬಂದಂತೆ ಕೋಲಿನಿಂದ ಮಹಿಳೆ ಬಾರಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುರೇಶ್ ಮತ್ತು ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಹಮ್ಮಿಕೊಂಡಿದ್ದ ರೋಡ್‌ಶೋನಲ್ಲಿ ಭಾಗವಹಿಸಿದರೆ ದುಡ್ಡು ಕೊಡೋದಾಗಿ ಮಂಜು ಗ್ರಾಮಸ್ಥರಿಗೆ ಹೇಳಿ ಕರೆದೊಯ್ದಿದ್ದ.ಆದರೆ ಕಾರ್ಯಕ್ರಮ ಮುಗಿದರೂ ಗ್ರಾಮದ ಯಾರಿಗೂ ಆತ ದುಡ್ಡು ನೀಡಿಲ್ಲ.