ನಿಮ್ಮ ಚರ್ಮವೂ ನೀಡುತ್ತದೆ! ಹೃದಯಾಘಾತದ ಮುನ್ಸೂಚನೆ ಎಚ್ಚರ!

(ನ್ಯೂಸ್ ಕಡಬ) newskadaba.com. ಬೆಂಗಳೂರು, ಏ.19. ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆ ಆಗದೇ  ಹೋದಾಗ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ. ಹೃದಯ ಹೀಗೆ ಕೆಲಸ ಮಾಡುವುದನ್ನು ನಿಲ್ಲಿಸುವುದಕ್ಕೆ ಹೃದಯಾಘಾತ ಎನ್ನುತ್ತಾರೆ.  ಹೃದಯಾಘಾತಕ್ಕೂ ಮುನ್ನ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಲಕ್ಷಣಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಹ ನೀಡುವ ಈ ಮುನ್ಸೂಚನೆ ಗಳನ್ನು  ಅರ್ಥ ಮಾಡಿಕೊಂಡರೆ ಸಂಭವಿಸಬಹುದಾದ ದೊಡ್ಡ ಅಪಘಾತವನ್ನು ತಡೆಯಬಹುದು.

ಹೃದಯಾಘಾತದ ಇತರ ಲಕ್ಷಣಗಳು :

ಎದೆನೋವಿನ ಹೊರತಾಗಿ, ಹೃದಯಾಘಾತಕ್ಕೂ ಮೊದಲು  ಅನೇಕ ಲಕ್ಷಣಗಳು ಕಾಣಿಸುತ್ತವೆ. ಚರ್ಮವು ತಿಳಿ ಬೂದು ಬಣ್ಣಕ್ಕೆ ತಿರುಗುತ್ತದೆ. ಪದೇ ಪದೇ ವಿನಾ ಕಾರಣ ಬೆವರೂ ಬರುತ್ತದೆ. ವಾಕರಿಕೆ,, ಉಸಿರಾಟದಲ್ಲಿ ತೊಂದರೆ, ಆತಂಕ, ತಲೆಸುತ್ತುವುದು  ಮುಂತಾದ ಲಕ್ಷಣಗಳು ಕಾಣಿಸುತ್ತವೆ.

Also Read  ಪಬ್​ಜಿ ಆಡಬೇಡ ಅಂದಿದ್ದಕ್ಕೆ ಅಪ್ಪನ ಕತ್ತು ಸೀಳಿ ಬಿಟ್ಟ ಮಗ...!

ಮಹಿಳೆ ಮತ್ತು ಪುರುಷರಲ್ಲಿ ಭಿನ್ನವಾಗಿರುತ್ತದೆ ಈ ಲಕ್ಷಣಗಳು :

ಪುರುಷರಿಗೆ  ಹೃದಯಾಘಾತಕ್ಕೂ ಮುನ್ನ ಎದೆ ನೋವು ಕಾಣಿಸಿಕೊಂಡರೆ,   ಮಹಿಳೆಯರಿಗೆ ಉಸಿರಾಟದ ತೊಂದರೆ, ಕುತ್ತಿಗೆ ಮತ್ತು ದವಡೆಯಲ್ಲಿ ನೋವು  ಕಾಣಿಸಿಕೊಳ್ಳುತ್ತದೆ.

ಬ್ಲಡ್ ಶುಗರ್  :

ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಇನ್ನೊಂದು ಕಾರಣವೆಂದರೆ ಮಧುಮೇಹ. ಮಧುಮೇಹ ಹೃದಯಾಘಾತದ ಅತ್ಯಂತ   ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ. ಈ ಕಾರಣದಿಂದಾಗಿ ರೋಗಿಗೆ ಸೌಮ್ಯವಾದ ಎದೆಯುರಿ ಅಥವಾ ಎದೆ ನೋವು ಕಾಣಿಸುತ್ತದೆ. ಬಹುತೇಕ ಮಂದಿ ಈ ಹಂತವನ್ನು ನಿರ್ಲಕ್ಷಿಸಿ ಬಿಡುತ್ತಾರೆ.

ಅಪಾಯವನ್ನು ಕಡಿಮೆ ಮಾಡುವುದು  ಹೇಗೆ ?

ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಸಹಾಯದಿಂದ ಮಾತ್ರ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.  ದೇಹ ತೂಕವನ್ನು ಕಾಪಾಡಿಕೊಳ್ಳುವುದು, ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು  ಸೇವಿಸುವ ಮೂಲಕ ಈ ಅಪಾಯವನ್ನು ತಳ್ಳಿ ಹಾಕಬಹುದು.

Also Read  ಕೋಚಿಂಗ್ ಇನ್‌ ಸ್ಟಿಟ್ಯೂಟ್‌ ಗೆ ತೆರಳಿದ ವಿದ್ಯಾರ್ಥಿ ನಾಪತ್ತೆ..!

 

error: Content is protected !!
Scroll to Top