ಆಸ್ಪತ್ರೆಯಿಂದ ಒಂದು ವಾರದ ಮಗುವನ್ನು ಕಿಡ್ನಾಪ್ ಮಾಡಿದ ಮಹಿಳೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.19. ವಾಣಿ ವಿಲಾಸ ಆಸ್ಪತ್ರೆಯಿಂದ ಮಹಿಳೆ ಯೊಬ್ಬಳು ಒಂದು ವಾರದ ಮಗುವನ್ನು ಕಿಡ್ನಾಪ್ ಮಾಡಿದ ಘಟನೆ ವರದಿಯಾಗಿತ್ತು.


ಈ ಪ್ರಕರಣ ವಿವಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಇದೀಗ ಪೊಲೀಸರು ದಿವ್ಯ ರಶ್ಮಿ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಸುಮಾರು 600 ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ ಪೊಲೀಸರಿಗೆ ಮಹಿಳೆಯ ಸುಳಿವು ದೊರಕಿದೆ. ಮಹಿಳೆ ದಿವ್ಯ ರಶ್ಮಿ ಮದುವೆಯಾಗಿದ್ದು ಗಂಡ ಕೆಲ ವರ್ಷಗಳ ಬಳಿಕ ಸಾವನ್ನಪ್ಪಿದ್ದ, ಮಕ್ಕಳಿಲ್ಲದ ಕಾರಣ ರಶ್ಮಿಗೆ ಒಂಟಿತನ ಕಾಡುತ್ತಿದ್ದು, ಈ ಕಾರಣ ಏಪ್ರಿಲ್ 15ರಂದು ವಾಣಿವಿಲಾಸ ಆಸ್ಪತ್ರೆಗೆ ಬಂದು, ಯಾರು ಇಲ್ಲದ ಸಮಯದಲ್ಲಿ ಮಗುವನ್ನು ಕಿಡ್ನಾಪ್ ಮಾಡಿದ್ದಳು ಎನ್ನಲಾಗುತ್ತಿದೆ.

error: Content is protected !!

Join the Group

Join WhatsApp Group