ಅಶೋಕ್‌ ಸ್ಪರ್ಧೆಗೆ ಕಾಂಗ್ರೆಸ್‌ ಕೌಂಟರ್‌ ಪ್ಲ್ಯಾನ್‌

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.19. ಸಚಿವ ಆರ್. ಅಶೋಕ್‌ ಅವರನ್ನು 2 ಕಡೆ ಕಣಕ್ಕಿಳಿಸುವ ಬಿಜೆಪಿ ಪ್ಲ್ಯಾನ್‌ಗೆ ಕೌಂಟರ್‌ ಪ್ಲ್ಯಾನ್‌ ಅನ್ನು ಇದೀಗ ಕಾಂಗ್ರೆಸ್‌ ಕೂಡ ರೆಡಿ ಮಾಡಿದೆ.

ಅಶೋಕ್‌ ಪದ್ಮನಾಭನಗರ ಮತ್ತು ಕನಕಪುರದಿಂದ ಸ್ಪರ್ಧಿಸುತ್ತಿದ್ದು ಅದಕ್ಕೆ ಪ್ರತಿಯಾಗಿ ಡಿಕೆಶಿ ಸಹೋದರ ಡಿ.ಕೆ ಸುರೇಶ್‌ ಅವರನ್ನು ಪದ್ಮನಾಭನಗರದಿಂದ ಕಣಕ್ಕಿಳಿಸುವುದಕ್ಕೆ ಚಿಂತನೆ ನಡೆಸಲಾಗಿದೆ.

ಅಲ್ಲಿ ರಘುನಾಥ ನಾಯ್ಡು ಅವರಿಗೆ ಟಿಕೆಟ್‌ ಘೋಷಿಸಿದ್ದರೂ, ಇದುವರೆಗೆ ಅವರು ನಾಮಪತ್ರ ಸಲ್ಲಿಸದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಸುರೇಶ್‌ ಅವರು ನಾಮಪತ್ರ ಸಲ್ಲಿಸುವ ಮೂಲಕ ಆಶೋಕ್’ಗೆ ತಿರುಗೇಟು ನೀಡಲಿದ್ದಾರೆ ಎಂದು ವರದಿಯಾಗಿದೆ.

Also Read  ಮಸೀದಿ, ಮದರಸ- ವಕ್ಫ್ ಮಂಡಳಿಯಲ್ಲಿ ನೋಂದಣಿ

 

 

 

error: Content is protected !!
Scroll to Top