ಉಡುಪಿ:  ಪೋಕ್ಸೋ ಪ್ರಕರಣ   ➤ 20 ವರ್ಷಗಳ ಕಠಿನ ಜೈಲು ಶಿಕ್ಷೆ

(ನ್ಯೂಸ್ ಕಡಬ)newskadaba.com ಉಡುಪಿ, ಏ.19. ಎರಡು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಪೋಕ್ಸೋ ಪ್ರಕರಣದ ಆರೋಪಿಗೆ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಸಾಹಿಲ್ (23) ಶಿಕ್ಷೆಗೆ ಗುರಿಯಾದ ಆರೋಪಿ ಎಂದು ಗುರುತಿಸಲಾಗಿದೆ. ಬೈಂದೂರು ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಬಾಲಕಿ ಸಾಗರದಲ್ಲಿ ವಾಸ ಮಾಡಿಕೊಂಡಿದ್ದು, ಆರೋಪಿಯು ಅಲ್ಲಿಯೇ ಇದ್ದ ಬಾಲಕಿಯ ತಂದೆಯ ಹೊಟೇಲ್‌ ಬಳಿ ಕೆಲಸ ಮಾಡುತ್ತಿದ್ದ. ಈ ವೇಳೆ ಆರೋಪಿ ಬಾಲಕಿಯನ್ನು ಸಂಪರ್ಕಿಸಿ ಪ್ರೀತಿಸುವುದಾಗಿ ಹೇಳಿದ್ದನು. 2021ರ ಜುಲೈ ತಿಂಗಳಲ್ಲಿ ಬಾಲಕಿಯು ತನ್ನ ಊರಿಗೆ ಬಂದಿದ್ದು, ಆ ಸಮಯ ಆಕೆಯ ಜನ್ಮದಿನದಂದು ಸಾಗರದಿಂದ ಬೈಂದೂರಿಗೆ ಬಂದು ಆತ, ಆಕೆಯನ್ನು ರಾತ್ರಿ ಹಾಡಿಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದ. ಇದೇ ರೀತಿ ಆರೋಪಿ ಬಾಲಕಿಯನ್ನು ಹಲವು ಬಾರಿ ದೈಹಿಕ ಸಂಪರ್ಕ ನಡೆಸಿದ್ದ.

Also Read  ಲಾರಿ ಹರಿದು ಯುವಕ ದಾರುಣ ಮೃತ್ಯು ► ಮೃತನ ವಾಹನದಲ್ಲಿ ಗಾಂಜ ಪತ್ತೆ..!!!

 

 

error: Content is protected !!
Scroll to Top