ಉಡುಪಿ: KSRTC ಬಸ್ ಢಿಕ್ಕಿ   ➤ ಪಾದಚಾರಿ ಮೃತ್ಯು

(ನ್ಯೂಸ್ ಕಡಬ)newskadaba.com ಉಡುಪಿ, ಏ.18. ನಗರದ ತ್ರೀವೇಣಿ ಸರ್ಕಲ್ ಬಳಿ KSRTC ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ರಾಜಶೇಖರ ಪೂಜಾರಿ (68) ಎಂದು ಗುರುತಿಸಲಾಗಿದೆ.

ರಾಜಶೇಖರ ಪೂಜಾರಿ ಅವರು ರೂಮಿನಿಂದ ತ್ರಿವೇಣಿ ಹೊಟೇಲಿಗೆ ಕೆಲಸ ಬರುತ್ತಿರುವಾಗ ಉಡುಪಿ ಕೆಎಂ ಮಾರ್ಗ ಕಡೆಯಿಂದ ಉಡುಪಿ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top