(ನ್ಯೂಸ್ ಕಡಬ)newskadaba.com ಗುಂಡ್ಯ, ಏ.14. ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಸಮೀಪ KSRTC ರಾಜಹಂಸ ಬಸ್ ಹಾಗೂ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕನ ಕೈ ಮುರಿತಕ್ಕೊಳಗಾದ ಘಟನೆ ಸಂಭವಿಸಿದೆ.
ಗಾಯಾಳುವನ್ನು ತುಮಕೂರಿನ ಮಧು(25)ಎಂದು ಗುರುತಿಸಲಾಗಿದ್ದು, ಆತನಿಗೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ.