ಉಳ್ಳಾಲ: ಧಾರ್ಮಿಕ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ..! ➤ ಶಾಸಕ ಯು.ಟಿ ಖಾದರ್ ವಿರುದ್ಧ ದೂರು ದಾಖಲು

(ನ್ಯೂಸ್ ಕಡಬ)newskadaba.com ಉಳ್ಳಾಲ, ಏ.14. ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಉಳ್ಳಾಲ ಶಾಸಕ ಯು.ಟಿ ಖಾದರ್ ವಿರುದ್ಧ ಚುನಾವಣಾ ಆಯೋಗಕ್ಕೆ SDPI ನಿಂದ ದೂರು ನೀಡಲಾಗಿದೆ.

ಮದನಿ ನಗರ, ಉಳ್ಳಾಲ ಕೋಡಿ ತೋಟದ ಮಸೀದಿ ಹಾಗೂ ಮದರಸಗಳಲ್ಲಿ ಶಾಸಕ ಯು.ಟಿ ಖಾದರ್ ಮಾತನಾಡುತ್ತಿರುವ ಚಿತ್ರಗಳು ವೈರಲ್ ಆಗಿತ್ತು. ಇದೊಂದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುವುದು ಸಮಂಜಸವಲ್ಲ, ತಕ್ಷಣ ಆಯೋಗ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನುವ ಒತ್ತಾಯ ಮಾಡಿದ್ದಾರೆ. ಆನ್ಲೈನ್ ಮುಖೇನ ದೂರನ್ನು ನೋಂದಣಿ ಮಾಡಿಕೊಂಡಿದ್ದಾರೆ.

Also Read  ನೆಲ್ಲಿಕಾರು ಗ್ರಾಮ ಸಭೆ ಮತ್ತು ವಾರ್ಡು ಸಭೆ

error: Content is protected !!
Scroll to Top