ತುಂಡರಿಸಿದ ಕೈಯನ್ನು ಯಶಸ್ವಿಯಾಗಿ ಮರು ಜೋಡಿಸಿದ ವೈದ್ಯರು

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.13. ಆಂಧ್ರಪ್ರದೇಶದ ಕುಪ್ಪಂ ಮೂಲದ ಚರಣ್ (11) ಎಂಬಾತ ಹುಲ್ಲು ಕತ್ತರಿಸುವ ಯಂತ್ರಕ್ಕೆ ಸಿಲುಕಿದ್ದ ಮರದ ಕಡ್ಡಿಯೊಂದನ್ನು ಕಿತ್ತು ಹಾಕಲು ಯತ್ನಿಸುವಾಗ ಮುಂಗೈ ತುಂಡಾಗಿ ಬಿದ್ದಿದೆ.


ಆತನನ್ನು ಸ್ಥಳೀಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ನಂತರ ಬೆಂಗಳೂರಿನ ನಾರಾಯಣ ಹೆಲ್ತ್ ಗೆ ಕಳುಹಿಸಲಾಗಿದೆ. ಬಾಲಕನ ತೋಳು ದೇಹದಿಂದ ಬೇರ್ಪಟ್ಟಿದ್ದರೂ, ನಾರಾಯಣದ ವೈದ್ಯರು ಕೈಯನ್ನು ಮತ್ತೆ ದೇಹಕ್ಕೆ ಜೋಡಿಸುವ ಶಸ್ತ್ರಚಿಕಿತ್ಸೆ ನಡೆಸಿದರು. ತುಂಡಾಗಿದ್ದ ತೋಳಿಗೆ ರಕ್ತದ ಸಂಚಲನೆಯನ್ನು ಮರು-ಸ್ಥಾಪಿಸಲು ಶಸ್ತ್ರಚಿಕಿತ್ಸೆಯು ಕೈಯನ ಗಾಯಗೊಂಡ ಎಲ್ಲಾ ರಚನೆಗಳ ಮೈಕ್ರೋಸರ್ಜಿಕಲ್ ದುರಸ್ತಿಯನ್ನು ಒಳಗೊಂಡಿತ್ತು.

Also Read  ರಾಜ್ಯ ಸರ್ಕಾರ: ಅರಣ್ಯ ಭೂಮಿ ಸಮೀಕ್ಷೆಗೆ 15 ದಿನಗಳಲ್ಲಿ ಸಮಿತಿ ರಚನೆ

 

error: Content is protected !!