(ನ್ಯೂಸ್ ಕಡಬ) newskadaba.com ಉಡುಪಿ, ಜ.11. ಸರ್ಕಾರಿ ಜಮೀನಿನಲ್ಲಿ ಕಟ್ಟಿದ್ದ ಸುಮಾರು 150 ಗುಡಿಸಲುಗಳನ್ನು ಸರಕಾರಿ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ ಘಟನೆ ಕುಂದಾಪುರದಲ್ಲಿ ಬುಧವಾರದಂದು ನಡೆದಿದೆ.
ಸ್ವಂತ ಜಮೀನಿಲ್ಲದ ಕುಂದಾಪುರದ ನಿವಾಸಿಗಳು ಕೆಲ ತಿಂಗಳ ಹಿಂದೆ ಕುಂದಾಪುರದ ಕಂದಾವರ ಎಂಬಲ್ಲಿ 25 ಎಕರೆ ಸರಕಾರಿ ಜಮೀನಿನಲ್ಲಿ ಕಟ್ಟಿಕೊಂಡಿದ್ದ ಸುಮಾರು 150 ದಲಿತರ, ಹಿಂದುಳಿದವರ, ಕಾರ್ಮಿಕರ ಮನೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ತಹಶೀಲ್ದಾರ್ ಜೆಸಿಬಿ ತರಿಸಿ ನೆಲ ಸಮಗೊಳಿಸಿದ್ದಾರೆ. ಮನೆ ತೆರವುಗೊಳಿಸುವುದನ್ನು ವಿರೋಧಿಸಿದ ಸಂತ್ರಸ್ತರನ್ನು ಬಂಧಿಸಲಾಗಿದೆ. ಸರಕಾರದ ಈ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.