ದಾವಣಗೆರೆ ಆನೆ ದಾಳಿಗೆ ಯುವತಿ ಬಲಿ

(ನ್ಯೂಸ್ ಕಡಬ) newskadaba.com. ಕಡಬ,ಏ.08. ಆನೆಯೊಂದು  ದಾಳಿ ನಡೆಸಿದ ಪರಿಣಾಮ ಯುವತಿಯೋರ್ವಳು ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ನಡೆದಿದೆ.  ಮೃತ ಯುವತಿಯನ್ನು ಸೋಮ್ಲಾಪುರದ ಕವನ (17) ಎಂದು ಗುರುತಿಸಲಾಗಿದೆ.

ಚನ್ನಗಿರಿ ತಾಲೂಕಿನ ಸೋಮ್ಲಾಪುರ ಹಾಗೂ ಕಾಶಿಪುರ ಸುತ್ತಮುತ್ತ ಆನೆ ಹಾವಳಿ ಜೋರಾಗಿದೆ. ಆನೆ ಓಡಾಟದ ಬಗ್ಗೆ ಅರಿವಿಗೆ ಬಾರದ ತಾಯಿ ಮಂಜುಳಾ (42) ಮತ್ತು ಮಗಳು ಕವನಾ (17) ಬೆಳಗ್ಗೆ ಜಮೀನಿನಲ್ಲಿ ಹೋಗಿ ಅವರೆಕಾಯಿ ಬಿಡಿಸುವಾಗ ಏಕಾಏಕಿ ಹಿಂದಿನಿಂದ ದಾಳಿ ಮಾಡಿದೆ.

Also Read  ಸುಬ್ರಹ್ಮಣ್ಯ: ಚಾರಣಕ್ಕೆಂದು ಕುಮಾರ ಪರ್ವತಕ್ಕೆ ತೆರಳಿ ನಾಪತ್ತೆಯಾಗಿದ್ದ ಯುವಕ ಪತ್ತೆ ➤ ಯುವಕನ ಜೀವ ಉಳಿಸಿದ ನೀರಿನ ಪೈಪ್ ➤ ಮೂರು ದಿನಗಳ ಕಾಲ ದಟ್ಟಡವಿಯಲ್ಲಿ ಕಳೆದ ಯುವಕನ ಯಶೊಗಾಥೆ

ಗಂಭೀರವಾಗಿ ಗಾಯಗೊಂಡ ಕವನಾಳನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲೇ ಆಕೆ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ ತಾಯಿ ಮಂಜುಳಾ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

error: Content is protected !!