ಉಳ್ಳಾಲ: ಅಂತರಾಜ್ಯ ವಾಹನ ಚೋರನ ಬಂಧನ

(ನ್ಯೂಸ್ ಕಡಬ)newskadaba.com ಉಳ್ಳಾಲ, ಏ.08. ಕೋಟೆಕಾರು ಬಳಿಯಿಂದ ಪಿಕಪ್ ವಾಹನ ಕಳವು ನಡೆಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಆತನಿಂದ ಕಳವು ನಡೆಸಿದ ಪಿಕಪ್ ವಾಹನ ವಶಪಡಿಸಿಕೊಳ್ಳಲಾಗಿದೆ.

ಕೇರಳ ಮೇಲ್ಪರಂಬ ಮಾಂಗಡ್ ನಿವಾಸಿ ಅಹಮ್ಮದ್ ರಮ್ಸಾನ್ ಯಾನೆ ರಮ್ಸಾನ್ (26) ಬಂಧಿತ ಎಂದು ಗುರುತಿಸಲಾಗಿದೆ. ಕೋಟೆಕಾರು ಸೌತ್ ಇಂಡಿಯಾ ಮರದ ಡಿಪೋ ಬಳಿ ನಿಲ್ಲಿಸಲಾಗಿದ್ದ ಪಿಕಪ್ ಕಳವು ನಡೆದಿತ್ತು.ಈ ಕುರಿತು ಮಾಲೀಕ ಮಹಮ್ಮದ್ ಶರೀಫ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಅಂತರಾಜ್ಯ ವಾಹನ ಕಳ್ಳರ ಜಾಡು ಹಿಡಿದಾಗ, ಆರೋಪಿ ರಮ್ಸಾನ್ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ಪಿಕಪ್ ವಾಹನ ಕಳವು ಬೆಳಕಿಗೆ ಬಂದಿದೆ. ಆರೋಪಿ ವಿರುದ್ದ ಉಳ್ಳಾಲ, ಬೆಳ್ತಂಗಡಿ, ಮಡಿಕೇರಿ, ಕೇರಳದ ಹೊಸದುರ್ಗ, ಕಾಸರಗೋಡು, ಕುಂಬಳೆ, ಬೇಡಗಂ, ಬೇಕಲ ಪೊಲೀಸ್ ಠಾಣೆಗಳಲ್ಲಿ ವಾಹನ ಕಳವು ಪ್ರಕರಣಗಳು ಇವೆ.

Also Read  ಆ.29 ಬಂಟ್ವಾಳ ತಾ.ಪಂ. ಸಾಮಾನ್ಯ ಸಭೆ

 

error: Content is protected !!
Scroll to Top