ಅಪ್ರಾಪ್ತೆ ಮೇಲೆ ಅತ್ಯಾಚಾರ .!   ➤ ದೂರು ದಾಖಲು  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.07 ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಘಾತಕಾರಿ ಕೃತ್ಯವೊಂದು ನಡೆದಿದೆ. 16 ವರ್ಷದ ಬಾಲಕಿ ಮೇಲೆ ಶಾಲೆಯಲ್ಲೇ ಅತ್ಯಾಚಾರವೆಸಗಲಾಗಿದ್ದು, ಆರೋಪಿ ಧರಿಸಿದ್ದ ಹಳದಿ ಶರ್ಟ್ ಸಹಾಯದಿಂದ ಆತನನ್ನು ಈಗ ಬಂಧಿಸಲಾಗಿದೆ. ಬಾಲಕಿ ಪೋಷಕರು ಎಂ ಸಿ ಡಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂತ್ರಸ್ತೆ ಸೇರಿದಂತೆ ತಮ್ಮ ಇಬ್ಬರು ಮಕ್ಕಳೊಂದಿಗೆ ಅಲ್ಲಿಯೇ ವಾಸವಾಗಿದ್ದರು.

ಶಾಲೆಯನ್ನು  ಕೆಲವು ದಿನಗಳಿಂದ ಮುಚ್ಚಲಾಗಿತ್ತು ಎನ್ನಲಾಗಿದ್ದು, ಘಟನೆ ನಡೆದ ದಿನ ಪೋಷಕರು ಮಕ್ಕಳನ್ನು ಬಿಟ್ಟು ವೇತನ ಪಡೆಯಲು ಹೊರ ಹೋಗಿದ್ದರು.ಈ ವೇಳೆ ಕಳ್ಳತನ ಮಾಡಲು ಅಲ್ಲಿಗೆ 27 ವರ್ಷದ ವಿವಾಹಿತ ವ್ಯಕ್ತಿ ಮೋನು ಎಂಬಾತ ನುಗ್ಗಿದ್ದು, ಬೆಲೆಬಾಳುವ ವಸ್ತು ದೋಚುವುದರ ಜೊತೆಗೆ ಚಾಕು ತೋರಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದರು.

Also Read  ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್  ಸಚಿವ ಹೆಚ್.ಡಿ.ರೇವಣ್ಣಗೆ ಮಧ್ಯಂತರ ರಿಲೀಫ್ ನೀಡಿದ ಹೈಕೋರ್ಟ್

 

 

 

error: Content is protected !!
Scroll to Top