(ನ್ಯೂಸ್ ಕಡಬ)Newskadaba.com ಈಜಿಪ್ಟ್,ಏ.07 ಈಜಿಪ್ಟ್ ನಲ್ಲಿರುವ ಪುರಾತನ ಕಾಲದ ಅರಮನೆಯೊಂದರ ಹೊರಗೆ ಇರುವ ಹೊಂಡದಲ್ಲಿ 12ಕ್ಕೂ ಹೆಚ್ಚು ಹಸ್ತಗಳು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪುರಾತನ ಈಜಿಪ್ಟ್ ನಲ್ಲಿದ್ದ ಭಯಾನಕ ಆಚರಣೆಯೊಂದನ್ನು ಇದು ಸಂಕೇತಿಸಿದೆ ಎಂದು `ನೇಚರ್’ ಮ್ಯಾಗಝಿನ್ ನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ.
ಉತ್ತರ ಈಜಿಪ್ಟ್ ನ ಅವಾರಿಸ್ ನಗರದಲ್ಲಿರುವ ಹೈಕ್ಸೋಸ್ ಅರಮನೆಯಲ್ಲಿರುವ ಹೊಂಡದ ಆಳದಲ್ಲಿ ಈ ಹಸ್ತಗಳು ಪತ್ತೆಯಾಗಿದೆ. 3000 ವರ್ಷಗಳ ಹಿಂದಿನ ಕಾಲದಲ್ಲಿ ಯುದ್ಧಕೈದಿಗಳಾಗಿ ಸೆರೆ ಸಿಕ್ಕಿದ್ದ ಶತ್ರುಗಳ ಯೋಧರ ಬಲಗೈಯ ಮುಂಗೈ ಇದಾಗಿದ್ದು ಇದರಲ್ಲಿ 11 ಪುರುಷರ ಕೈಗಳಾಗಿದ್ದರೆ 1 ಮಹಿಳೆಯ ಕೈಯಾಗಿದೆ.
.