‘ನಟ ಸದೀಪ್’ಗೆ ಜೀವ ಬೆದರಿಕೆ ಪತ್ರ ಪ್ರಕರಣ ➤ ಜೊತೆಯಲ್ಲಿದ್ದವರಿಂದಲೇ ಸಂಚಿನ ಶಂಕೆ, ತೀವ್ರಗೊಂಡ ತನಿಖೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.06. ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಗೆ ಜೀವ ಬೆದರಿಕೆ ಪತ್ರ ಬರೆದ ಪ್ರಕರಣ ಸಂಬಂಧ ಜೊತೆಯಲ್ಲಿದ್ದವರಿಂದಲೇ ಸಂಚಿನ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿಯೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.


ನಟ ಸುದೀಪ್ ಗೆ ಜೊತೆಯಲ್ಲಿದ್ದವರೇ ಜೀವ ಬೆದರಿಕೆ ಪತ್ರವನ್ನು ಕಳಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಈಗಾಗಲೇ ನಟ ಸುದೀಪ್ ಕೂಡ ಬೆದರಿಕೆ ಪತ್ರ ಬಂದ ನಂತ್ರ, ಇದರ ಹಿಂದೆ ಸಿನಿರಂಗದ ಕೈವಾಡವಿದೆ ಎಂಬುದಾಗಿ ಹೇಳಿದ್ದರು. ಈ ನಿಟ್ಟಿನಲ್ಲಿ ತನಿಖೆ ಕೈಗೊಂಡಿರುವಂತ ಪೊಲೀಸರು, ಸಿಸಿಬಿಯವರು ಸುದೀಪ್ ಜೊತೆಯಲ್ಲಿದ್ದವರನ್ನೇ ಬಳಸಿಕೊಂಡ ಆ ಶಂಕಿತ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Also Read  ಮಂಗಳೂರು: ಪಿಯು ವಿದ್ಯಾರ್ಥಿಗೆ ಚೂರಿ ಇರಿತ ➤‌ ಗಂಭೀರ ಗಾಯ

error: Content is protected !!
Scroll to Top