ಉಪ್ಪಿನಂಗಡಿ ಬ್ಲಾಕ್ ವತಿಯಿಂದ SDPI ಮಹಿಳಾ ಚುನಾವಣಾ ಪೂರ್ವಭಾವಿ ಸಭೆ

(ನ್ಯೂಸ್ ಕಡಬ)newskadaba.com ಪುತ್ತೂರು, ಏ.06. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮಹಿಳಾ ಚುನಾವಣಾ ಪೂರ್ವಭಾವಿ ಸಭೆಯು ಝರೀನಾ ರವರ ನೇತೃತ್ವದಲ್ಲಿ ಉಪ್ಪಿನಂಗಡಿಯಲ್ಲಿ ನಡೆಯಿತು ಎಂದು ವರದಿ ತಿಳಿಸಿದೆ.

ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ SDPI ರಾಜ್ಯ ಮಹಿಳಾ ಚುನಾವಣಾ ಉಸ್ತುವಾರಿ ನಸ್ರಿಯಾ ಬೆಳ್ಳಾರೆಯವರು ಮಾತನಾಡಿ ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗಿದ್ದು ಮಹಿಳಾ ಮತದಾರರಿಗೆ ಅಭ್ಯರ್ಥಿಗೆ ಮತಯಾಚಿಸುವುದರೊಂದಿಗೆ ಸುಳ್ಳು ಕೇಸ್ ನಲ್ಲಿ ಅನ್ಯಾಯವಾಗಿ ಬಂಧಿಸಿ ನ್ಯಾಯ ನಿರಾಕರಣೆ ಮಾಡುತ್ತಿರುವ ವಿಚಾರದ ಬಗ್ಗೆಯೂ ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಹಾಗೂ ಎಸ್‌ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆರವರ ಗೆಲುವಿಗೆ ಅವಿರತ ಶ್ರಮ ವಹಿಸಬೇಕೆಂದು ಕರೆ ನೀಡಿದರು. ಸಭೆಯಲ್ಲಿ ಪುತ್ತೂರು ತಾಲೂಕಿನ ಮಹಿಳಾ ಚುನಾವಣಾ ಉಸ್ತುವಾರಿ ಝಾಹಿದಾ ಸಾಗರ್ ಮತದಾರರನ್ನು ಚುನಾವಣಾ ಪ್ರಚಾರ ಮಾಡುವ ಬಗ್ಗೆ ಚರ್ಚೆ ನಡೆಸಿದರು.

Also Read  TMC ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಿರುವ ಹಿನ್ನೆಲೆ.!➤ಧ್ವಂಸಗೊಳಿಸುವಂತೆ ಹೈಕೋರ್ಟ್‌ ಆದೇಶ

 

error: Content is protected !!
Scroll to Top