ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಲು ಸಹಾಯವಾಣಿ

 (ನ್ಯೂಸ್ ಕಡಬ)newskadaba.com ಬೆಂಗಳೂರು, ಏ.05. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಚುನಾವಣಾ ಆಯೋಗ ಕಣ್ಗಾವಲನ್ನು ಹೆಚ್ಚಿಸಿದೆ.

ಚುನಾವಣೆ ಪ್ರಕ್ರಿಯೆ ಮುಕ್ತವಾಗಿ ಹಾಗೂ ನ್ಯಾಯಯುತ ರೀತಿಯಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯಂತ್ರಣ ಕೊಠಡಿಗಳ ಸ್ಥಾಪಿಸುವಂತೆ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ನಾಯಕರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದರೆ ಜನರು ನಿಯಂತ್ರಣ ಕೊಠಡಿಗಳ ಸಹಾಯವಾಣಿ ಸಂಖ್ಯೆ 080-28604331 ಮತ್ತು 080-28600954ಗಳ ಮೂಲಕ ದೂರು ನೀಡಬಹುದಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

Also Read  ಕೋಳಿ ಸಾಕಣೆ ತರಬೇತಿ

 

 

error: Content is protected !!
Scroll to Top