ಕರಾವಳಿಗೆ ಬಿಜೆಪಿ, ಕಾಂಗ್ರೆಸ್‌ ಹಿರಿಯ ನಾಯಕರ ಯಾತ್ರೆ ➤ ಮೇ 6ರಂದು ಮೋದಿ ಮಂಗಳೂರಿಗೆ

 (ನ್ಯೂಸ್ ಕಡಬ)newskadaba.com ಮಂಗಳೂರು, ಏ.05. ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಕರಾವಳಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ಮೇ ತಿಂಗಳಲ್ಲಿ ಕರಾವಳಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೇ 06 ಅಥವಾ 07ರಂದು ಕರಾವಳಿಗೆ ಬರುವ ಸಾಧ್ಯತೆ ಇದೆ.

ಇವರಲ್ಲಿ ಒಬ್ಬರು ಮಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಮತ್ತಿಬ್ಬರು ಉಡುಪಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಎರಡೂ ಕಾರ್ಯಕ್ರಮಗಳು ಜಿಲ್ಲಾ ಕೇಂದ್ರದಲ್ಲಿ ನಡೆಯಲಿವೆ ಎನ್ನಲಾಗುತ್ತಿದೆ. ಅಲ್ಲದೇ ಅಮಿತ್‌ ಶಾ ಮತ್ತು ಜೆ.ಪಿ. ನಡ್ಡಾ ನೇತೃತ್ವದಲ್ಲಿ ತಲಾ 20ರಂತೆ ರಾಜ್ಯದ ಒಟ್ಟು 80 ಕಡೆ ಬೃಹತ್‌ ರ‍್ಯಾಲಿಗಳು ನಡೆಯಲಿವೆ.

Also Read  ಜ.24 ರಿಂದ 26 ರವರೆಗೆ ಫಲಪುಷ್ಪ ಪ್ರದರ್ಶನ-2020

error: Content is protected !!
Scroll to Top