(ನ್ಯೂಸ್ ಕಡಬ)newskadaba.com ಕಾರವಾರ, ಏ. 04. ಚಲಿಸುತ್ತಿದ್ದ ಬಸ್ ನ ಸ್ಟಿಯರಿಂಗ್ ತುಂಡಾಗಿ ಅದು ಕಂದಕಕ್ಕೆ ಉರುಳಿದ ಘಟನೆ ಸಿದ್ದಾಪುರ ತಾಲೂಕಿನ 16ನೇ ಮೈಲಿಕಲ್ ಬಳಿ ನಡೆದಿದ್ದು ಪ್ರಯಾಣಿಕರು ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ.
ಹಳಿಯಾಳದಿಂದ ಸಾಗರಕ್ಕೆ ಹೋಗುತ್ತಿದ್ದ ಬಸ್‍ನಲ್ಲಿ 47 ಜನ ಪ್ರಯಾಣಿಸುತ್ತಿದ್ದರು. ಕಂದಕಕ್ಕೆ ಉರುಳಿದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಲ್ಲಿಯೇ ನಿಂತು ಪ್ರಯಾಣಿಕರು ಪಾರಾಗಿದ್ದಾರೆ.