4 ಹಿಂದುತ್ವ ಹೋರಾಟಗಾರರ ಭದ್ರತೆ ಹಿಂಪಡೆದ ಪೊಲೀಸ್‌ ಇಲಾಖೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಏ. 04. ಜೀವ ಬೆದರಿಕೆ ಇದ್ದ ಹಿನ್ನೆಲೆ ಹಿಂದುತ್ವ ಹೋರಾಟಗಾರ ಸತ್ಯಜಿತ್‌ ಸುರತ್ಕಲ್‌, ವಿಚಾರವಾದಿ ನರೇಂದ್ರ ನಾಯಕ್ ಜೊತೆ ಬಿಜೆಪಿ ಮುಖಂಡರುಗಳಾದ ರಹೀಂ ಉಚ್ಚಿಲ್‌ ಹಾಗೂ ಜಗದೀಶ್‌ ಶೇಣವ ಅವರಿಗೆ ಸರಕಾರ ನೀಡಿದ್ದ ಪೊಲೀಸ್ ಭದ್ರತಾ ಸಿಬ್ಬಂದಿ ಸೇವೆಯನ್ನು ಹಿಂಪಡೆಯಲಾಗಿದೆ.

ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ 2006ರಲ್ಲಿ ಹಿಂದುತ್ವ ಹೋರಾಟಗಾರ ಸತ್ಯಜಿತ್‌ ಸುರತ್ಕಲ್‌ ಗೆ ಕಾಂಗ್ರೆಸ್‌ ಸರಕಾರ ಭದ್ರತೆ ನೀಡಿತ್ತು. ಅದಾದ ನಂತರದ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಬಿಜೆಪಿ ಮುಖಂಡ ರಹೀಂ ಉಚ್ಚಿಲ್‌, ಜಗದೀಶ್‌ ಶೇಣವ ಹಾಗೂ ವಿಚಾರವಾದಿ ನರೇಂದ್ರ ನಾಯಕ್‌ ಅವರಿಗೆ ಸರಕಾರ ಭದ್ರತೆ ನೀಡಿತ್ತು. ಇದೀಗ ನೀಡಿದ್ದ ಭದ್ರತೆಯನ್ನು ಪೊಲೀಸ್‌ ಇಲಾಖೆ ಹಿಂಪಡೆದಿದೆ.

 

Scroll to Top