ನಕಲಿ ಬಿಎಡ್‌ ಅಂಕಪಟ್ಟಿ ಮೂಲಕ ಹುದ್ದೆ ಗಿಟ್ಟಿಸಿಕೊಡ ಶಿಕ್ಷಕ.?   ➤ವಾರ್ಡನ್‌ ಹುದ್ದೆಯಿಂದ ಪ್ರಿನ್ಸಿಪಾಲ್‌ ಹುದ್ದೆ..!  

(ನ್ಯೂಸ್ ಕಡಬ)Newskadaba.com ಧಾರವಾಡ, ಏ.01   ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ್ ಎಂಬವರು ನಕಲಿ ಅಂಕಪಟ್ಟಿ ಮೂಲಕ ಈ ಹುದ್ದೆಗೇರಿದ್ದಾರೆ ಎಂದು ಆರೋಪಿಸಲಾಗಿದೆ.

ಅವರು ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆಯಿಂದ ಪ್ರಾಂಶುಪಾಲ ಹುದ್ದೆಗೆ ಜಿಗಿದಿದ್ದಾರೆ ಎಂದು ಸಿದ್ದಪ್ಪ ಅಕ್ಕಿ ಎನ್ನುವವರು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಲ್ಲನಗೌಡರ್‌ ಅವರು ಪ್ರಾಂಶುಪಾಲ ಹುದ್ದೆ ಗಿಟ್ಟಿಸುವ ದುರುದ್ದೇಶದಿಂದ ಉತ್ತರ ಪ್ರದೇಶದ ಸಂಸ್ಥೆಯಿಂದ ಬಿಎಡ್ ನಕಲಿ ಅಂಕಪಟ್ಟಿ ಪಡೆದಿದ್ದಾರೆ ಎನ್ನುವುದು ಅಕ್ಕಿ ಅವರ ಆರೋಪ. 2001ರಲ್ಲೇ ಉತ್ತರ ಪ್ರದೇಶದ ಡಿಪಾರ್ಟ್ಮೆಂಟ್ ಆಫ್ ಓಪನ್ ಡಿಸ್ಟಾನ್ಸ್ ಎಜುಕೇಶನ್ ಕೇಂದ್ರದ ಅಂಕಪಟ್ಟಿ ಪಡೆದಿದ್ದಾರೆ. ಇದು ಸರ್ಕಾರಕ್ಕೆ ಮಾಡಿರುವ ಮೋಸ.

Also Read  ಕಡಬ ವ್ಯಾಪ್ತಿಯಲ್ಲಿ ಒಟ್ಟು 9 ಮಂದಿಗೆ ಕೊರೋನಾ ದೃಢ

 

 

 

 

 

 

error: Content is protected !!
Scroll to Top