ಚಾಲಕನ ನಿಯಂತ್ರಣ ತಪ್ಪಿ ಆ್ಯಂಬುಲೆನ್ಸ್‌ ಪಲ್ಟಿ..!!   ➤ನಾಲ್ವರು ಪ್ರಾಣಪಾಯದಿಂದ ಪಾರು

(ನ್ಯೂಸ್ ಕಡಬ)Newskadaba.com ಕಾರ್ಕಳ, ಮಾ.31. ಕಾರ್ಕಳ ರೋಟರಿ ಆಸ್ಪತ್ರೆಯ ಆ್ಯಂಬುಲೆನ್ಸ್‌ ಕಾರ್ಕಳದಿಂದ ಎಳ್ಳಾರೆ ಸಾಗುತ್ತಿದ್ದ ವೇಳೆ ಬಂಗ್ಲೆಗುಡ್ಡೆಯಲ್ಲಿ ಬೈಕ್‌ ಒಂದು ಅಡ್ಡ ಬಂದ ಪರಿಣಾಮ ಆ್ಯಂಬುಲೆನ್ಸ್‌ ಚಾಲಕ ಅದನ್ನು ತಪ್ಪಿಸಲು ಯತ್ನಿಸಿದ್ದನು. ಈ ಸಂದರ್ಭ ಆ್ಯಂಬುಲೆನ್ಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಆ್ಯಂಬುಲೆನ್ಸ್‌ನಲ್ಲಿದ್ದ ನಾಲ್ವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

ನಾಲ್ವರು ರೋಟರಿ ಆಸ್ಪತ್ರೆಯಲ್ಲಿ ಕಣ್ಣಿನ ಶಿಬಿರದಲ್ಲಿ ಸರ್ಜರಿ ಮಾಡಿಸಿಕೊಂಡು ಆಸ್ಪತ್ರೆಯ ಆ್ಯಂಬುಲೆನ್ಸ್‌ ನಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಗಾಯಗೊಂಡವರನ್ನು ಕಾರ್ಕಳ ರೋಟರಿ ಆಸ್ಪತ್ರೆಗೆ ಕರೆಯೊಯ್ಯಲಾಗಿದ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ.

Also Read  ಜಾಲ್ಸೂರು: ಶ್ರೀ ಸುಬ್ರಾಯ ಅನಂತ ಕಾಮತ್ ಗೇರುಬೀಜ ಕಾರ್ಖಾನೆಯು 48ನೇ ವರ್ಷಕ್ಕೆ ಪಾದಾರ್ಪಣೆ

.

 

 

 

error: Content is protected !!
Scroll to Top