ಡಚ್ ಪ್ರವಾಸಿಗರಿಗೆ ಚೂರಿ ಇರಿತ..!!   ➤ ಓರ್ವ ಸಿಬ್ಬಂದಿಯನ್ನು ಬಂಧಿಸಿದ ಪೋಲೀಸರು  

(ನ್ಯೂಸ್ ಕಡಬ)Newskadaba.com ಗೋವಾ,ಮಾ.31 ಡಚ್ ಪ್ರವಾಸಿಯೊಬ್ಬರಿಗೆ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಲ್ಲದೆ, ಪ್ರವಾಸಿಗರಿಗೆ ಸಹಾಯ ಮಾಡಲು ಹೋದ ಇನ್ನೊಬ್ಬ ವ್ಯಕ್ತಿಗೆ ಚೂರಿಯಿಂದ ಇರಿದಿರುವ ಉತ್ತರ ಗೋವಾದ ಪೆರ್ನೆಮ್‌ನಲ್ಲಿರುವ ರೆಸಾರ್ಟ್‌ನ ಸಿಬ್ಬಂದಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಆರೋಪಿಯನ್ನು ಅಭಿಷೇಕ್ ವರ್ಮಾ ಎಂದು ಗುರುತಿಸಲಾಗಿದ್ದು, ಗಾಯಗೊಂಡ ವ್ಯಕ್ತಿಯನ್ನು ಯುರಿಕೋ ಎಂದು ಗುರುತಿಸಲಾಗಿದೆ.

“ದೂರುದಾರರ ಬಾಡಿಗೆ ಟೆಂಟ್‌ಗೆ ರೆಸಾರ್ಟ್ ಸಿಬ್ಬಂದಿಯೊಬ್ಬ ಅತಿಕ್ರಮಣ ಮಾಡಿದ್ದಾನೆ, ಡಚ್ ಮಹಿಳೆ ಸಹಾಯಕ್ಕಾಗಿ ಬೊಬ್ಬಿಟ್ಟಾಗ, ಸ್ಥಳೀಯ ವ್ಯಕ್ತಿಯೊಬ್ಬರು ಮಹಿಳೆಯ ರಕ್ಷಣೆಗೆ ಬಂದರು . ಆಗ ಆರೋಪಿ ಓಡಿಹೋದ, ನಂತರ ಆರೋಪಿಯು ಚಾಕುವಿನೊಂದಿಗೆ ಹಿಂತಿರುಗಿ ಸ್ಥಳೀಯ ವ್ಯಕ್ತಿಯ ಮೇಲೆ ಹಾಗೂ ದೂರುದಾರರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ. ದೂರುದಾರ ಮತ್ತು ಸ್ಥಳೀಯ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ಪೊಲೀಸ್ ಸೂಪರಿಂಟೆಂಡೆಂಟ್ (ಎಸ್ಪಿ) ನಿಧಿನ್ ವಲ್ಸನ್ ತಿಳಿಸಿದ್ದಾರೆ.

Also Read  ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಪತ್ತೆ: FSSAI ಎಚ್ಚರಿಕೆ

 

 

 

error: Content is protected !!
Scroll to Top