8 ವರ್ಷದ ಮಗನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ತಂದೆ

(ನ್ಯೂಸ್ ಕಡಬ)newskadaba.com ಕೋಲಾರ, ಮಾ.29. ಎಂಟು ವರ್ಷದ ಮಗನನ್ನು ಪಾಪಿ ತಂದೆಯೊಬ್ಬ ಚೂರಿಯಿಂದ ಇರಿದು ಕೊಲೆ ಮಾಡಿರುವ ಹೃದಯವಿದ್ರಾಹಕ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿ ನಡೆದಿದೆ.

ಎಂಟು ವರ್ಷದ ಬಾಲಕ ಭುವನ್‌ ತೇಜ್‌ ಅಪ್ಪನ ಕೈಯಿಂದ ಕೊಲೆಯಾದ ಮಗ.ಸುಬ್ರಮಣಿ ನಂಗಲಿ ಎಂಬಾತ ಮಗನಿಗೆ ಕೊಲೆ ಮಾಡಿದ್ದಾನೆ‌. ಆರೋಪಿ ಸುಬ್ರಮಣಿ ಈ‌ ಮೊದಲು ತನ್ನ ಪತ್ನಿಯನ್ನು ಕೊಂದು ಜೈಲು ಪಾಲಾಗಿದ್ದ ಎನ್ನಲಾಗಿದ್ದು, ಭುವನ್‌ತೇಜ್‌ ಕೋಲಾರದ ನಂಗಲಿ ಗ್ರಾಮದ ಎಸ್‌ಬಿಐ ಬ್ಯಾಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಅಜ್ಜಿ ಜೊತೆ ವಾಸವಿದ್ದ. ಜೈಲಿನಿಂದ ಬಂದಿದ್ದ ಸುಬ್ರಮಣಿ ಆಗಾಗ ಕೋಲಾರದ ಮನೆಗೆ ಹೋಗಿ ಮಗನನ್ನು ತನ್ನ ಜತೆ ಬರುವಂತೆ ಒತ್ತಾಯಿಸುತ್ತಿದ್ದ. ಆದರೆ ಭುವನ್‌ ತೇಜ್‌ ಒಪ್ಪುತ್ತಲೇ ಇರಲಿಲ್ಲ.

 

Scroll to Top