ಬಂಟ್ವಾಳ: ದಾಖಲಾತಿ ಇಲ್ಲದೆ ಹಣ ಸಾಗಾಟ ➤ ಕಾರು ಸಹಿತ ನಗದು ವಶಕ್ಕೆ

(ನ್ಯೂಸ್ ಕಡಬ)newskadaba.com  ಬಂಟ್ವಾಳ, ಮಾ.28. ಕಾರಿನಲ್ಲಿ ಯಾವುದೇ ದಾಖಲಾತಿ ಇಲ್ಲದ ಲಕ್ಷಾಂತರ ರೂಪಾಯಿ ನಗದು ಹಣ ಪತ್ತೆಯಾಗಿದ್ದು, ವಿಟ್ಲ ಪೊಲೀಸರ ಕಾರ್ಯಾಚರಣೆ ವೇಳೆ ನಗದು ಸಹಿತ ಕಾರನ್ನು ವಶಕ್ಕೆ ಪಡೆದುಕೊಂಡ ಘಟನೆ ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿ ನಡೆದಿದೆ.

ಕರ್ನಾಟಕ ರಾಜ್ಯ ಚುನಾವಣೆ ಪ್ರಯುಕ್ತ ಅಂತರರಾಜ್ಯ ಚೆಕ್‌ ಪೋಸ್ಟ್‌ನಲ್ಲಿ ವಿಟ್ಲ ಎಸ್.ಐ.ಸಂದೀಪ್ ಶೆಟ್ಟಿ ಸಿಬ್ಬಂದಿಗಳ ಜೊತೆ ಕರ್ತವ್ಯದಲ್ಲಿರುವ ವೇಳೆ ವಾಹನ ತಪಾಸಣೆ ನಡೆಸುತ್ತಿರುವಾಗ ಸಾಲೆತ್ತೂರು ಕಡೆಯಿಂದ ಬಾಕ್ರಬೈಲು ಕಡೆಗೆ ಹೋಗುತ್ತಿದ್ದ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾಗ ಗಮನಕ್ಕೆ ಬಂದಿದೆ. ಚಾಲಕ ಬಶೀರ್ ಎಂಬಾತನ ಕಾರಿನ ಡ್ಯಾಶ್‌ ಬೋರ್ಡ್‌‌ನಲ್ಲಿ 500 ರೂಪಾಯಿ ಮುಖ ಬೆಲೆಯ ತಲಾ 100 ನೋಟುಗಳಿರುವ 3 ಬಂಡಲ್‌ಗಳು ಇದ್ದು ಇದರಲ್ಲಿ ಒಟ್ಟು ರೂಪಾಯಿ 1,50,000/- ನಗದು ಪತ್ತೆಯಾಗಿದೆ.

Also Read  ಪುತ್ತೂರು: ಬಾಲವನಕ್ಕೆ ಸಾರ್ವಜನಿಕ ಪ್ರವೇಶಕ್ಕೆ ಇಂದಿನಿಂದ ಅವಕಾಶ

error: Content is protected !!
Scroll to Top