ವಿದ್ಯುತ್ ತಗುಲಿ ಕಾಡಾನೆ ಸಾವು

(ನ್ಯೂಸ್ ಕಡಬ) newskadaba.com. ಕೊಯಮತ್ತೂರು. ಮಾ.25. ಅರಣ್ಯ ವ್ಯಾಪ್ತಿಯ ಖಾಸಗಿ ಜಮೀನಿನೊಂದರಲ್ಲಿ ಕಾಡಾನೆಗೆ ವಿದ್ಯುತ್ ತಂತಿಯ ತಗುಲಿ ಸಾವನ್ನಪ್ಪಿರುವ ಘಟನೆ ಕೊಯಮತ್ತೂರು ವಿಭಾಗದ ಪೆರಿಯಾನಾಯ್ಕನ್‌ಪಾಳ್ಯಂ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಜಮೀನಿನಲ್ಲಿ ಮುಂಜಾನೆ ವಿದ್ಯುತ್ ತಂತಿಯು ಕಾಡಾನೆಯೊಂದು ಮೇಲೆ ಬಿದ್ದ ಪರಿಣಾಮ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಡಗಾಂ ಮೀಸಲು ಅರಣ್ಯ ಪ್ರದೇಶದ ಪಟ್ಟಾ ಜಮೀನಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಆನೆಯು ತನ್ನ ದೇಹವನ್ನು ಉಜ್ಜುತ್ತಿದ್ದಾಗ ಆಕಸ್ಮಿಕವಾಗಿ ಅದರ ಮೇಲೆ ಬಿದ್ದಿದೆ ಗಂಡು ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಅವರು ತಿಳಿಸಿದ್ದಾರೆ. ಈ ಅರಣ್ಯ ಇಲಾಖೆ ಸಿಬ್ಬಂದಿ ವಿದ್ಯುತ್‌ ಇಲಾಖೆಗೆ ಮಾಹಿತಿ ನೀಡಿದ್ದು, ಕೂಡಲೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಹೇಳಲಾಗಿದೆ.

Also Read  ಆಗಸ್ಟ್‌ 15 ರಂದು ಕೊರೋನಾ ಸೋಂಕಿನಿಂದ ಸ್ವಾತಂತ್ಯ್ರ ಪಡೆಯುವ ಸಂಕಲ್ಪ ಮಾಡೋಣ ➤ ಪ್ರಧಾನಿ ನರೇಂದ್ರ ಮೋದಿ

 

error: Content is protected !!
Scroll to Top