ಕೇಂದ್ರ ಬಜೆಟ್‌ ಮಂಡನೆ ➤ ಗೃಹ ಸಚಿವಾಲಯದಿಂದ ಇಂದು ಅನುಮೋದನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ದೆಹಲಿ ಸರ್ಕಾರದ ಬಜೆಟ್ ಮಂಡನೆಗೆ ಕೇಂದ್ರ ಗೃಹ ಸಚಿವಾಲಯವು ಇಂದು ಅನುಮೋದನೆ ನೀಡಿದೆ. ಈ ಕುರಿತು ಲೆಫ್ಟಿನೆಂಟ್ ಗವರ್ನರ್‍ ವಿ.ಕೆ. ಸಕ್ಸೇನಾ ಅವರ ಕಚೇರಿ ಮೂಲಗಳು ಮಾಹಿತಿ ನೀಡಿರುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಸರ್ಕಾರದ ವೈಫಲ್ಯ ಮುಚ್ಚಿಡುವುದಕ್ಕಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ವೃಥಾ ಆರೋಪ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ. ದೆಹಲಿ ರಾಜ್ಯವಲ್ಲ, ಅದು ಕೇಂದ್ರಾಡಳಿತ ಪ್ರದೇಶ. ಹೀಗಾಗಿ ಭಾರತ ಸರ್ಕಾರದ ಅಂಗವಾಗಿದ್ದು, ಬಜೆಟ್‌ನ್ನು ಸರ್ಕಾರ ತಡೆ ಹಿಡಿದಿಲ್ಲ ಎಂದೂ ವಿ.ಕೆ. ಸಕ್ಸೇನಾ ಅವರ ಕಚೇರಿ ಸ್ಪಷ್ಟಪಡಿಸಿದೆ.

Also Read  ಬದುಕಿದ್ದವರನ್ನು ಸತ್ತಿದ್ದಾರೆಂದು ಹೇಳಿ ವಿವಾದ ಸೃಷ್ಟಿಸಿದ ಸಂಸದೆ ► ಕೇಂದ್ರಕ್ಕೆ ಶೋಭಾ ಕರಂದ್ಲಾಜೆ ಬರೆದಿರುವ ಪತ್ರದಲ್ಲಿ ಯಡವಟ್ಟು

 

error: Content is protected !!
Scroll to Top