ಸೀಬೆ ಹಣ್ಣಿನ ಆರೋಗ್ಯದ ಗುಟ್ಟು

(ನ್ಯೂಸ್ ಕಡಬ) newskadaba.com ಮಾ. 21. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು.

ಸಂಶೋಧನೆಯೊಂದರ ಪ್ರಕಾರ, ಮಧುಮೇಹ ಕಾಯಿಲೆಯಿಂದ ನರಳುವವರು ಸೀಬೆಹಣ್ಣನ್ನು ತಿನ್ನುವಾಗ ಅದರ ಮೇಲಿನ ಹಸಿರು ಸಿಪ್ಪೆಯನ್ನು ತೆಗೆದು ಸೇವಿಸಿದರೆ ಒಳಿತು. ಏಕೆಂದರೆ, ಅದರಲ್ಲಿನ ಅತ್ಯಧಿಕ ಗ್ಲೂಕೋಸ್ ಪ್ರಮಾಣ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಸುವುದು. ವಿಟಮಿನ್ ಎ, ಬಿ ಹಾಗೂ ಸಿ ಮತ್ತು ಪೊಟಾಶಿಯಂ ಅಂಶಗಳನ್ನು ಹೊಂದಿರುವ ಸೀಬೆಕಾಯಿ, ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದಂತೆ. ಇದಕ್ಕಾಗಿ ಸೀಬೆ ಎಲೆಗಳ ಪೇಸ್ಟ್ ಮಾಡಿ, ಅದನ್ನ ಮುಖಕ್ಕೆ ಹಚ್ಚಿ ತೊಳೆದಲ್ಲಿ ಜಿಡ್ಡಿನಾಂಶ ಮಾಯವಾಗಿ ಚರ್ಮ ಬಿಗಿಯಾಗಿ ಕಾಂತಿಯುಕ್ತವಾಗುತ್ತದೆ. ಇದರಲ್ಲಿರುವ ವಿಟಮಿನ್ ಬಿ ನಿಂದ ಮಿದುಳು ಚುರುಕಾಗುತ್ತದೆ. ಓದುವ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ಅಧಿಕ ನಾರಿನಂಶವು ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗದಂತೆ ತಡೆಗಟ್ಟುತ್ತವೆ. ಕೆಲವರಿಗೆ ಸೀಬೆಹಣ್ಣಿನಿಂದ ಗಂಟಲಲ್ಲಿ ಅಲರ್ಜಿಯಾಗುವ ಸಾಧ್ಯತೆಗಳಿವೆ. ಅಂಥವರು ಹಣ್ಣಿಗೆ ಉಪ್ಪು ಬೆರೆಸಿ ಸೇವಿಸಬೇಕು. ವೃದ್ಧರು, ಹಲ್ಲಿನ ತೊಂದರೆ ಇರುವವರು ಸೀಬೆಹಣ್ಣಿನ ಜ್ಯೂಸ್ ಸೇವಿಸಬಹುದು. ಸೀಬೆಹಣ್ಣಿನಿಂದ ಶೀತ, ನೆಗಡಿ ಉಂಟಾಗುವುದಿಲ್ಲ. ಬದಲಿಗೆ ಶೀತ-ನೆಗಡಿಯನ್ನು ಉಂಟು ಮಾಡುವ ಬ್ಯಾಕ್ಟೀರಿಯಗಳನ್ನು ನಾಶಗೊಳಿಸುತ್ತವೆ. ಈ ಗುಣದಿಂದ ಇದನ್ನು ಅತಿಸಾರ ಹಾಗೂ ವಾಂತಿ-ಭೇದಿ ಇರುವ ಮಂದಿ ಸೇವಿಸುವುದು ಉತ್ತಮ.

Also Read  ಮೇ 8 – ವಿಶ್ವ ರೆಡ್ ಕ್ರಾಸ್ ದಿನ

error: Content is protected !!
Scroll to Top