ಕೇಂದ್ರ ಸರ್ಕಾರದ ಸಾಲ 155 ಲಕ್ಷ ಕೋಟಿ ➤ ನಿರ್ಮಲಾ ಸೀತಾರಾಮನ್‌

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ (2023ರ ಮಾರ್ಚ್‌ 31) ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತವು ₹ 155.8 ಲಕ್ಷ ಕೋಟಿ (ದೇಶದ ಒಟ್ಟು ಆಂತರಿಕ ಉತ್ಪಾದನೆಯ ಶೇಕಡ 57.3ರಷ್ಟು ) ಅಂದಾಜು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಗೆ ತಿಳಿಸಿದ್ದಾರೆ.

ಒಟ್ಟು ಸಾಲದ ಮೊತ್ತದಲ್ಲಿ ವಿದೇಶಿ ಸಾಲದ ಮೊತ್ತವು ಸದ್ಯ ಇರುವ ವಿನಿಮಯ ದರದ ಆಧಾರದಲ್ಲಿ ₹ 7.03 ಲಕ್ಷ ಕೋಟಿ (ಜಿಡಿಪಿಯ ಶೇ 2.6) ಆಗಲಿದೆ ಎಂದು ಅವರು ಹೇಳಿದ್ದಾರೆ. ಒಟ್ಟು ಸಾಲದಲ್ಲಿ ವಿದೇಶಿ ಸಾಲದ ಪ್ರಮಾಣವು ಶೇ 4.5ರಷ್ಟು ಇದೆ ಎಂದು ಅವರು ಹೇಳಿದ್ದಾರೆ.

Also Read  'ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸುವಂತಿಲ್ಲ'- ಪರಮೇಶ್ವರ್‌

 

error: Content is protected !!
Scroll to Top