ವಿದ್ಯಾರ್ಥಿ ನಿಲಯಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರುಮಾ. 21. 2022-2023ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಟ್ರಿಕ್ ನಂತರದ (ಸ್ನಾತಕೋತ್ತರ ಹಾಗೂ ವೃತ್ತಿಪರ ಕೋರ್ಸಗಳ ವಿದ್ಯಾರ್ಥಿಗಳು) ವಿದ್ಯಾರ್ಥಿ ನಿಲಯಗಳಿಗೆ ಹೂಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಆನ್ ಲೈನ್ https://shp.karnataka.gov.in/ ಮೂಲಕ ಅರ್ಜಿ ಆಹ್ವಾನಿಸಿದ ದಿನಾಂಕನ್ನು ವಿಸ್ತರಿಸಲಾಗಿದೆ. ಈ ಹಿಂದೆ ಫೆ.11 ಅಂತಿಮ ದಿನವಾಗಿತ್ತು. ಆದರೆ ಕೆಲವೂಂದು ವೃತ್ತಿಪರ ಪದವಿ ಮತ್ತು ಸ್ನಾತ್ತಕೋತ್ತರ ಕೋರ್ಸಿನ ತರಗತಿಗಳು ತಡವಾಗಿ ಪ್ರಾರಂಭವಾಗಿರುವುದರಿಂದ ಅರ್ಜಿ ಸಲ್ಲಿಸುವ ಅವಧಿಯನ್ನು 2023ರ ಮಾ.27ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.bcwd.karnataka.gov.in/ ವೆಬ್‍ಸೈಟ್‍ನಲ್ಲಿ ವಿವರ ನೀಡಲಾಗಿದೆ. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ bcwb.hostels@karnataka.gov.inಗೆ ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ 080-8050370006 ಕರೆ ಮಾಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಗೂ ಮಂಗಳೂರು ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಗುತ್ತಿಗಾರು: ಮೊಗ್ರ ದೇವಸ್ಥಾನದಲ್ಲಿ ನಿರಂತರ ಗಣಪತಿ ಹವನ ಕಾರ್ಯಕ್ರಮಕ್ಕೆ ಚಾಲನೆ

error: Content is protected !!
Scroll to Top