(ನ್ಯೂಸ್ಕಡಬ) newskadaba.com.ಶಿವಮೊಗ್ಗ .ಮಾ.18. ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಜೋಡಿಯನ್ನು ಸಂಚಾರ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಯುವಕನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವತಿ ಆರೋಗ್ಯವಾಗಿದ್ದಾಳೆ ಎಂದು ತಿಳಿದು ಬಂದಿದೆ. ಶಿವಮೊಗ್ಗದ ತುಂಗಾ ನದಿ ಹಳೆ ಸೇತುವೆ ಬಳಿ ಈ ಘಟನೆ ಸಂಭವಿಸಿದೆ. ರಾಜು ಎಂಬಾತ ಯುವತಿ ಜೊತೆಗೆ ಸೇತುವೆ ಬಳಿ ಬಂದಿದ್ದಾನೆ. ಇಬ್ಬರು ಸೇತುವೆಯಿಂದ ತುಂಗಾ ಹೊಳೆಗೆ ಜಿಗಿಯಲು ಮುಂದಾಗಿದ್ದು, ಈ ವೇಳೆ ಯುವಕ ಹೊಳೆಗೆ ಹಾರಿದ್ದಾನೆ. ಯುವತಿಯನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.