ಜಿಲ್ಲಾಧ್ಯಕ್ಷರನ್ನು ಬಂಧಿಸಿ ಅವಮಾನ ➤ ಪೊಲೀಸ್ ಅಧಿಕಾರಿ ವಿರುದ್ಧ SDPI ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಮಾ. 18. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರನ್ನು ಬಂಧಿಸಿ ಅವಮಾನಿಸಿರುವ ಚಿಕ್ಕಮಗಳೂರು ನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀನಿವಾಸ್ ವಿರುದ್ಧ ಚಿಕ್ಕಮಗಳೂರಿನ ಆಝಾದ್ ಪಾರ್ಕ್ ವೃತ್ತದಲ್ಲಿ SDPI ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಝ್ಮತ್ ಪಾಷ, ಚಿಕ್ಕಮಗಳೂರು ನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀನಿವಾಸ್ ಮತ್ತು ತಂಡ ಮಂಗಳವಾರ ಮಧ್ಯರಾತ್ರಿ 12.45 ರ ಸಮಯದಲ್ಲಿ SDPI ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಗೌಸ್ ಮುನೀರ್ ರವರ ಮನೆಗೆ ಏಕಾಏಕಿ ಬಂದು ಯಾವುದೇ ನೋಟಿಸ್ ಅಥವಾ ಸಮನ್ಸ್ ಸಹ ನೀಡದೆ ವಿನಃ ಕಾರಣ ಬಂಧಿಸಿ, ವಿಚಾರಣೆ ನಡೆಸಲು ಬಸವನಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸುಮಾರು 2,3 ಗಂಟೆ ವಿಚಾರಣೆ ನಡೆಸಿ ರಾತ್ರಿ 4 ಗಂಟೆಯ ಸಮಯದಲ್ಲಿ ಮನೆಗೆ ಕಳುಹಿಸಿರುತ್ತಾರೆ, ಹಾಗೂ ವಿಚಾರಣೆಯ ಸಂದರ್ಭದಲ್ಲಿ ಮೊಬೈಲ್ ಕಸಿದುಕೊಂಡು, ಏಕವಚನದಲ್ಲಿ ಬೈದು, ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸಿ, ಅಧಿಕಾರ ದರ್ಪ ಬಳಸಿ ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆ ಎಂದು ಆರೋಪಿಸಿದರು.

Also Read  ಮಹಿಳೆಯ ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ಕಿಡಿಗೇಡಿ.! ➤ದೂರು ದಾಖಲು

error: Content is protected !!
Scroll to Top