ಪುತ್ತೂರು: ವಿಷಪದಾರ್ಥ ಸೇವಿಸಿ ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 18. ವ್ಯಕ್ತಿಯೋರ್ವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಡ್ಕಿದು ಗ್ರಾಮದ ಬಂಗೇರಕೋಡಿ ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಬಂಗೇರಕೋಡಿ ನಿವಾಸಿ ವೀರಪ್ಪ ಗೌಡ ಎಂದು ಗುರುತಿಸಲಾಗಿದೆ‌. ಇವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಪಕ್ಕದಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರ ಪುತ್ರ ಮುರಳೀಧರ ಕುಮಾರ್ ಬಿ.ರವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಲೋಕಸಭಾ ಚುನಾವಣಾ ವೇಳೆ ನೀತಿ ಸಂಹಿತೆ ಉಲ್ಲಂಘನೆ ► ಕೇಂದ್ರ ಸಚಿವ ಸದಾನಂದ ಗೌಡ ವಿರುದ್ಧದ ಎಫ್ಐಆರ್ ರದ್ದು.!!

error: Content is protected !!
Scroll to Top