ಕಾರು ಮತ್ತು ಕಂಟೈನರ್ ನಡುವೆ ಅಪಘಾತ ➤ ಪ್ರಾಧ್ಯಾಪಕನೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com   ಹೊನ್ನಾವರ, ಮಾ.18. ಕಾರು ಹಾಗೂ ಕಂಟೈನರ್ ನಡುವೆ ಢಿಕ್ಕಿ ಸಂಭವಿಸಿ ಬಂಟಕಲ್ಲು ಶ್ರಿ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕರೊಬ್ಬರು ಮೃತಪಟ್ಟ ಘಟನೆ ಹೊನ್ನಾವರದಲ್ಲಿ ನಡೆದಿದೆ.

ಹಿರಿಯ ಸಹಾಯಕ ಪ್ರಾಧ್ಯಾಪಕ ಅನಂತೇಶ ರಾವ್‌ (40) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅನಂತೇಶ ರಾವ್ ಅವರು ಸೋದೆ ಮೂಲ ಮಠಕ್ಕೆ ಉಡುಪಿಯಿಂದ ತೆರಳುತ್ತಿದ್ದರು. ಈ ವೇಳೆ ಹೊನ್ನಾವರ ಬಳಿ ಅವರ ಕಾರು ಕಂಟೈನರ್‌ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Also Read  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥ ನಿರ್ಮಾಣ ➤ ಇದು ಮಲೆಕುಡಿಯರಿಗೆ ಒಲಿದ ಕಲೆ

error: Content is protected !!
Scroll to Top