(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 17. ನೈರುತ್ಯ ರೈಲ್ವೆ ಎಸ್ಎಸ್ಎಸ್ ಹುಬ್ಬಳ್ಳಿ ವಿಭಾಗದ ಆಲಮಟ್ಟಿ ಮತ್ತು ವಂಡಾಲ್ ನಿಲ್ದಾಣಗಳ ನಡುವಿನ ಇಂಜಿನಿಯರಿಂಗ್ ಕಾಮಗಾರಿಗಳಿಗೆ ಲೈನ್ ಬ್ಲಾಕ್ ಆಗಿರುವ ಕಾರಣ ಇಂದಿನಿಂದ (ಮಾ.17) ಮಂಗಳೂರಿನಿಂದ ಹೊರಡುವ 07378 ಸಂಖ್ಯೆಯ ಮಂಗಳೂರು ಜಂಕ್ಷನ್- ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಯನ್ನು ಬಾಗಲಕೋಟೆ ಮತ್ತು ವಿಜಯಪುರ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.