80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ➤ ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ದಾವಣಗೆರೆ, ಮಾ. 17.  ಭಾರತದ ಚುನಾವಣಾ ಆಯೋಗವು ಪ್ರಥಮ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. 80 ವರ್ಷ ಮೇಲ್ಪಟ್ಟವರ ಮನೆಗಳಿಗೆ ಬಿಎಲ್ ಒಗಳು ಭೇಟಿ ನೀಡಿ ಮಾಹಿತಿ ನೀಡುತ್ತಾರೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಆಸಕ್ತರು ಚುನಾವಣಾ ಅಧಿಸೂಚನೆ ಪ್ರಕಟವಾದ 5 ದಿನಗಳ ಒಳಗೆ 11 ಬಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಜಿಲ್ಲೆಯಿಂದ ಇಂತಹ ಒಟ್ಟು 27,000 ಮತದಾರರನ್ನು ಪಟ್ಟಿ ಮಾಡಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಅಂಗವಿಕಲರಿಗೆ  ಮನೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

Also Read  ಸೆ. 26ರಂದು ಬೆಂಗಳೂರು ಬಂದ್ - ನಾಳೆ ಯಾವ ಸೇವೆ ಇರುತ್ತೆ, ಏನಿರಲ್ಲ ಎಂಬುದನ್ನುತಿಳಿಯಿರಿ

error: Content is protected !!
Scroll to Top