ಕೋಮು ಘರ್ಷಣೆ, ಕಲ್ಲು ತೂರಾಟ ➤ 20 ಮಂದಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ)newskadaba.com ಹಾವೇರಿ, ಮಾ.15. ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ ಹಿಂದೂಪರ ಸಂಘಟನೆಗಳು ಇಂದು ಆಯೋಜಿಸಿದ್ದ ಬೃಹತ್ ಬೈಕ್ ರ್ಯಾಲಿ ವೇಳೆ ಗಲಾಟೆ ನಡೆದಿದೆ. ಮಾರ್ಚ್ 9 ರಂದು ನಡೆದಿದ್ದ ಎರಡು ಕೋಮುಗಳ ನಡುವಿನ ಗಲಾಟೆ ಇಂದು ಮುಂದುವರೆದಿದ್ದು, ಬೈಕ್ ರ್ಯಾಲಿ ವೇಳೆ ಕೆಲ ಯುವಕರು ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಗಲಭೆಗೆ ಕಾರಣವಾಗಿದೆ.


ಕಾರಂಜಿ ಸರ್ಕಲ್ ನಲ್ಲಿ ನಡೆಯುತ್ತಿದ್ದ ಬೈಕ್ ರ್ಯಾಲಿ ವೇಳೆ ಆಟೋ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದ್ದು, ಮಸೀದಿ ಮತ್ತು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲ ಮಕ್ಕಳು ಹಾಗೂ ಮಹಿಳೆಯರಿಗೆ ಕಲ್ಲು ತೂರಾಟದಿಂದ ಗಾಯವಾಗಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು 20 ಮಂದಿಯನ್ನು ವಶಕ್ಕೆ ಪಡೆದಿದ್ದು, ಹೈ ಆಲರ್ಟ್ ಘೋಷಿಸಿದ್ದಾರೆ.

Also Read  ಪವರ್ ಸ್ಟಾರ್ ನಿಧನದ ಹಿನ್ನೆಲೆ ➤ ನಾಳೆ (ಅ. 30) ಖಾಸಗಿ ಶಾಲೆಗಳಿಗೆ ರಜೆ ಘೋಷಣೆ

error: Content is protected !!
Scroll to Top