(ನ್ಯೂಸ್ ಕಡಬ) newskadaba.com ಮಂಗಳೂರು, ಜ.04. ಬುಧವಾರ ಮಧ್ಯಾಹ್ನ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತನ ಕೊಲೆಯ ನಂತರ ಜಿಲ್ಲೆಯ ಕೆಲವೆಡೆ ಕೋಮು ಸಂಘರ್ಷಗಳು ಆರಂಭಗೊಂಡಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.
ಬುಧವಾರ ಸಂಜೆ ಕಾಟಿಪಳ್ಳದಲ್ಲಿ ಬಸ್ ಗೆ ಕಲ್ಲೆಸೆಯಲಾಗಿದ್ದು, ಬುಧವಾರದಂದು ರಾತ್ರಿಯೂ ದುಷ್ಕರ್ಮಿಗಳು ಮತ್ತೊಂದು ಬಸ್ಸಿಗೆ ಕಲ್ಲೆಸೆದಿದ್ದಾರೆ. ಅಲ್ಲದೆ ಗುರುವಾರದಂದು ದೀಪಕ್ ರ ಶವಯಾತ್ರೆಗೆ ಸಂಘಟನೆಗಳು ಸಿದ್ಧತೆ ನಡೆಸಿರುವಾಗಲೇ ಸರಕಾರ ಅನುಮತಿಯನ್ನು ನಿರಾಕರಿಸಿ ಕಮೀಷನರ್ ವ್ಯಾಪ್ತಿಯಲ್ಲಿ ಕರ್ನಾಟಕ ಪೊಲೀಸ್ ಆ್ಯಕ್ಟ್ 35 ರ ಪ್ರಕಾರ ಗುರುವಾರದಂದು ನಿಷೇಧಾಜ್ಞೆ ಜಾರಿಗೊಳಿಸಿದೆ. ಆದರೆ ಸುರತ್ಕಲ್, ಕಾಟಿಪಳ್ಳ ಪರಿಸರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದು, ಒಟ್ಟಿನಲ್ಲಿ ಕರಾವಳಿ ಪರಿಸರ ಬೂದಿ ಮುಚ್ಚಿದ ಕೆಂಡದಂತಿದೆ.