ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಚುನಾವಣೆ ಅಡ್ಡಿಯಾಗುವುದಿಲ್ಲ      ➤ ಶಿಕ್ಷಣ ಇಲಾಖೆ        

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.14. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಈ ನಡುವಲ್ಲೇ ರಾಜ್ಯ ವಿಧಾನಸಭಾ ಚುನಾವಣೆ ಕೂಡ ಹತ್ತಿರ ಬರುತ್ತಿರುವುದು ಪರೀಕ್ಷೆಯ ಮೇಲೆ ಬೀರುವ ಸಾಧ್ಯತೆಗಳ ಕುರಿತು ಆತಂಕಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಶಿಕ್ಷಣ ಇಲಾಖೆಯು ಪರೀಕ್ಷೆಗೆ ಚುನಾವಣೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 31 ರಿಂದ ಪ್ರಾರಂಭವಾಗಿ ಏಪ್ರಿಲ್ 15 ರವರೆಗೆ ನಡೆಯಲಿವೆ. ಚುನಾವಣೆಯ ದಿನಾಂಕಗಳು ಇನ್ನೂ ಪ್ರಕಟವಾಗದಿದ್ದರೂ, ಮೇ 2023 ರ ಮೊದಲು ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Also Read  ಮೂರೇ ತಿಂಗಳಲ್ಲಿ ತುಳು ಕಲಿತ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ► ತುಳು ಭಾಷೆಯ ವ್ಯಾಮೋಹದಿಂದ ಮನೆಯಲ್ಲೂ ತುಳುಭಾಷೆ

error: Content is protected !!
Scroll to Top