ಶಿಕ್ಷಣ ಸಚಿವ ಬಿಸಿ ನಾಗೇಶ್ ರಾಜೀನಾಮೆಗೆ AIYF ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 14. ಸರಕಾರದ ಅವೈಜ್ಞಾನಿಕ ಶಿಕ್ಷಣ ನೀತಿ ಮತ್ತು ನ್ಯಾಯಾಲಯದ ತೀರ್ಪನ್ನು ಪಾಲಿಸದೇ 5 ಹಾಗೂ 8ನೇ ತರಗತಿಗಳ ಪಬ್ಲಿಕ್ ಪರೀಕ್ಷೆಗಳ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡುತ್ತಿರುವ ಶಿಕ್ಷಣ ಸಚಿವ ನಾಗೇಶ್ ರಾಜೀನಾಮೆಗೆ ಎಐವೈಎಫ್ ಆಗ್ರಹಿಸಿದೆ.

ರಾಜ್ಯದ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು 2022ರಂದು ಹೊರಡಿಸಿದ್ದ ಆದೇಶವು ನಿಯಮ ಬಾಹಿರವೆಂದು ತಿಳಿಸಿದ್ದ ರಾಜ್ಯ ಹೈಕೋರ್ಟ್ ಇದನ್ನು ರದ್ದುಗೊಳಿಸುವಂತೆ ಆದೇಶಿತ್ತು. ಈ ಆದೇಶದ ವಿರುದ್ಧ ಸರಕಾರವು ಮತ್ತೆ ನ್ಯಾಯಾಲಯದ ಮೆಟ್ಟಲೇರಿತ್ತು. ಆದಾಗ್ಯೂ ಹೈಕೋರ್ಟ್ ಈ ಮೇಲ್ಮನವಿಯನ್ನು ತಿರಸ್ಕರಿಸಿದೆ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಸಚಿವ ನಾಗೇಶ್ ರಾಜೀನಾಮೆ ಸಲ್ಲಿಸಬೇಕು ಎಂದು ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್)ನ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಬೋಳೂರು ಮತ್ತು ಕಾರ್ಯದರ್ಶಿ ಜಗತ್‌ಪಾಲ್ ಕೋಡಿಕಲ್ ಆಗ್ರಹಿಸಿದ್ದಾರೆ.

Also Read  ಕಡಬ: ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳ ಆಯ್ಕೆ - ಅಧ್ಯಕ್ಷರಾಗಿ ಕ್ಸೇವಿಯರ್ ಬೇಬಿ, ಕಾರ್ಯದರ್ಶಿಯಾಗಿ ಜೋಮೊನ್ ಎಂ.ಜೆ ಆಯ್ಕೆ

error: Content is protected !!
Scroll to Top