ಸುರತ್ಕಲ್: ಯುವಕನಿಗೆ ತಲವಾರು ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.03. ಕಾಟಿಪಳ್ಳದಿಂದ ಮಂಗಳೂರಿಗೆ ಬೈಕಿನಲ್ಲಿ ಆಗಮಿಸುತ್ತಿದ್ದ ಯುವಕನೋರ್ವನಿಗೆ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ನಡೆಸಿರುವ ಘಟನೆ ಬುಧವಾರ ರಾತ್ರಿ ಸುರತ್ಕಲ್ ನಲ್ಲಿ ನಡೆದಿದೆ.

ದಾಳಿಗೊಳಗಾದ ಯುವಕನನ್ನು ಬಂದರ್ ನಿವಾಸಿ ಅಬ್ದುರ್ರಝಾಕ್ ಎಂಬವರ ಪುತ್ರ ಮುಹಮ್ಮದ್ ಮುಬಶ್ಶಿರ್ (22) ಎಂದು ಗುರುತಿಸಲಾಗಿದೆ. ಕಾಟಿಪಳ್ಳದಲ್ಲಿ ನೆರವೇರಿದ್ದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳೂರಿಗೆ ಹಿಂತಿರುಗುತ್ತಿದ್ದಾಗ ದುಷ್ಕರ್ಮಿಗಳ ತಂಡವೊಂದು ತಡೆದು ತಲವಾರು ದಾಳಿ ನಡೆಸಿದೆ. ದಾಳಿಯಿಂದ ಮುಬಶ್ಶಿರ್ ರ ತಲೆಗೆ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಸುಳ್ಯ: ಭಾರೀ ಮಳೆ- ಭೂಕುಸಿತ ➤ ಆತಂಕದಲ್ಲಿ ಜನತೆ

error: Content is protected !!
Scroll to Top