(ನ್ಯೂಸ್ ಕಡಬ)newskadaba.com ಉಳ್ಳಾಲ, ಮಾ.14. ಕೊಚ್ಚಿ,ಕೂಟನ್ನಾಡ್- ಮಂಗಳೂರು, ಬೆಂಗಳೂರು ಅಂತರಾಜ್ಯ ಗ್ಯಾಸ್ ಪೈಪ್ ಲೈನ್ ಕಾಮಗಾರಿಯ ರೂ.30 ಲಕ್ಷ ಬೆಲೆಯ ಸೊತ್ತುಗಳನ್ನು ಕಳವು ನಡೆಸಿರುವ ಘಟನೆ ಹರೇಕಳ ಗ್ರಾಮದ ಇನೋಳಿ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಐಎಲ್ ಆಂಡ್ ಎಫ್ ಎಸ್ ಕಂಪೆನಿ ಕಾಮಗಾರಿಯನ್ನು ನಡೆಸುತ್ತಿದ್ದು, ಕಂಪೆನಿಯ ಎಡ್ಮಿನ್ ಆಫೀಸರ್ ಸತೀಶ್ ಪಾಲ್ ಎಂಬವರು ನೀಡಿರುವ ದೂರಿನಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.