ಮಲ್ಪೆ ಬೀಚ್ ನಲ್ಲಿ ಶೌಚಾಲಯ ಬಳಕೆ ಶುಲ್ಕ ದುಬಾರಿ ➤ ಫೋಟೋ ವೈರಲ್

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 10. ಮಲ್ಪೆ ಬೀಚ್‌‌ನ ಸಾರ್ವಜನಿಕ ಶೌಚಾಲಯದಲ್ಲಿ ಮೂತ್ರ ಮಾಡಬೇಕಾದರೆ 10 ರೂ. ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಿದ್ದು, ಶೌಚಾಲಯವನ್ನು ಬಳಕೆ ಮಾಡಿರುವ ಸಾರ್ವಜನಿಕರೊಬ್ಬರು ಈ ರಶೀದೀ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತು ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್ ಪ್ರಶ್ನೆಗೆ ಉತ್ತರಿಸಿದ ಶಾಸಕ ರಘುಪತಿ ಭಟ್, ಈ ಕುರಿತು ಈಗಾಗಲೇ ಮಂತ್ರ‌ ಟೂರಿಸಂ ಡೆವಲಪ್ಮೆಂಟ್ ಕಂಪನಿಯವರ ಜೊತೆ ಸ್ವಷ್ಟನೆ ಕೇಳಿದ್ದು ಮೂತ್ರ ವಿಸರ್ಜನೆಗೆ ಯಾವುದೇ ಶುಲ್ಕವಿಲ್ಲ, ಕೇವಲ ಸ್ನಾನಗೃಹಕ್ಕೆ ಮಾತ್ರ 10 ರುಪಾಯಿ ಶುಲ್ಕ ಪಡೆಯಲಾಗುತ್ತಿದೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

Also Read  ಕಡಬದ MSIL ಮದ್ಯದಂಗಡಿ ಫುಲ್‌ ರಶ್

error: Content is protected !!
Scroll to Top