ರಾಜ್ಯ ಸರ್ಕಾರದಿಂದ ಪೊಲೀಸ್ ಇಲಾಖೆಯ ಮೂಲಕ ಹಿಂದೂ ವಿರೋಧಿ ನೀತಿ: ಜಗದೀಶ್ ಶೇಣವ ► ಪುತ್ತೂರು: ಬೃಹತ್ ಹಿಂದೂ ಜಾಗೃತಿ ಸಮಾವೇಶ

(ನ್ಯೂಸ್ ಕಡಬ) newskadaba.com ಪುತ್ತೂರು, ಜ.03. ರಾಜ್ಯ ಸರಕಾರವು ಪೊಲೀಸ್ ಇಲಾಖೆಯನ್ನು ಕೈಗೊಂಬೆಯನ್ನಾಗಿಸಿ ಹಿಂದೂ ಕಾರ್ಯಕರ್ತರಿಗೆ ದೌರ್ಜನ್ಯ ನಡೆಸುತ್ತಿದೆ‌ ಎಂದು ಆರೋಪಿಸಿ ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವಠಾರದಲ್ಲಿ ಬೃಹತ್ ಹಿಂದೂ ಜಾಗೃತಿ ಸಮಾವೇಶ ನಡೆಯಿತು.

ಸಮಾವೇಶದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಸಂಪ್ಯ ಠಾಣಾ ಎಸ್ಐ ಅಬ್ದಲ್ ಕಾದರ್ ಹಾಗೂ ಕೆಲವು ಸಿಬ್ಬಂದಿಗಳನ್ನು ಜನವರಿ 05 ರ ಒಳಗಾಗಿ ಅಮಾನತ್ತು ಮಾಡಬೇಕು. ಇಲ್ಲದಿದ್ದಲ್ಲಿ ಜನವರಿ 07 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲಿ ಜಿಲ್ಲಾ ಬಂದ್ ಮಾಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಹಿಂದೂ ಜಾಗರಣಾ ವೇದಿಕೆಯ ಮುಖಂಡರಾದ ಸತ್ಯಜಿತ್ ಸುರತ್ಕಲ್ ಮಾತನಾಡಿದರು. ವೇದಿಕೆಯಲ್ಲಿ ಬಜರಂಗದಳದ ಪ್ರಮುಖರಾದ ಶರಣ್ ಪಂಪ್ ವೆಲ್, ಹಿಂದೂ ಜಾಗರಣಾ ವೇದಿಕೆಯ ಮುಖಂಡರಾದ ರಾಧಾಕೃಷ್ಣ ಅಡ್ಯಂತ್ತಾಯ, ಚನಿಲ ತಿಮ್ಮಪ್ಪ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Also Read  ಕಡಬ: ಝೂಬಿ ಗೋಲ್ಡ್ 5ನೇ ವಾರ್ಷಿಕೋತ್ಸವದ ಲಕ್ಕೀ ಡ್ರಾ ಫಲಿತಾಂಶ ➤ ಪ್ರಥಮ ಬಹುಮಾನ ಪಡೆದ ರೇಷ್ಮಾಶ್ರೀ

ವಿವಿಧ ಗ್ರಾಮಗಳಿಂದ ಸಾವಿರಾರು ಕಾರ್ಯಕರ್ತರು ಗ್ರಾಮ ಮಟ್ಟದ ಪ್ರಮುಖರ ನೇತೃತ್ವದಲ್ಲಿ ಪಾದಯಾತ್ರೆ, ಮೆರವಣಿಗೆಯ ಮೂಲಕ ಸಮಾವೇಶಕ್ಕೆ ಆಗಮಿಸಿದ್ದರು. ಕೋಡಿಂಬಾಡಿ ಅಶ್ವತಕಟ್ಟೆಯಿಂದ ಆರಂಭಗೊಂಡ ಬೃಹತ್ ಹಿಂದೂ ಜಾಗೃತ ಸಮಾವೇಶದ ಪಾದಯಾತ್ರೆಯಲ್ಲಿ ಪ್ರಮುಖರಾದ ಮುರಳಿಕೃಷ್ಣಹಸಂತಡ್ಕ , ರವಿರಾಜ ಶೆಟ್ಟಿ ಕಡಬ, ಅರುಣ್ ಕುಮಾರ್ ಪುತ್ತಿಲ, ಭುಜಂಗ ಕುಲಾಲ್, ಸಂಜೀವ ಮಠಂದೂರು, ಅಶೋಕ್ ಕುಮಾರ್ ರೈ, ಪದ್ಮನಾಭ ಕೊಟ್ಟಾರಿ, ಬ್ರಿಜೇಶ್ ಚೌಟ, ಸಹಜ್ ರೈ, ಶಿವರಂಜನ್, ಸುಲೋಚನಾ ಭಟ್, ಶೈಲಜಾ ಭಟ್, ಶ್ರೀಕೃಷ್ಣ ಉಪಾಧ್ಯಾಯ, ಸುಭಾಶ್ ಪಡೀಲ್, ಪದ್ಮನಾಭ ಕೋಂಕೊಡಿ, ಹರಿಣಿ ಪುತ್ತೂರಾಯ, ಪುಲಸ್ತ್ಯಾ ರೈ, ಆಶಾ ತಿಮ್ಮಪ್ಪ, ಹರೀಶ್ ದೋಲ್ಪಾಡಿ, ಅಜಿತ್ ರೈ ಹೊಸಮನೆ ಮೊದಲಾದವರು ಭಾಗವಹಿಸಿದ್ದರು.

Also Read  ಕುಟ್ರುಪಾಡಿ: ಹಾ.ಉ.ಸ.ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ►ಅಧ್ಯಕ್ಷರಾಗಿ 3ನೇ ಬಾರಿಗೆ ಕಿರಣ್ ಗೋಗಟೆ, ಉಪಾಧ್ಯಕ್ಷರಾಗಿ ವಿಶ್ವನಾಥ ರೈ ಆರ್ತಿಲ

error: Content is protected !!
Scroll to Top