ರೈಸ್ ಪುಲ್ಲರ್ ಹಗರಣ ➤ 8 ಮಂದಿ ಬಂಧನ​       

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಸಾರ್ವಜನಿಕರಿಗೆ ರೈಸ್ ಪುಲ್ಲರ್ ಲೋಹದ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

ಲೋಹದ ಪಾತ್ರೆಯಲ್ಲಿ ಏರೋಸ್ಪೇಸ್ ಸಂಸ್ಥೆಗಳು ಬಳಕೆ ಮಾಡುವ ತಾಮ್ರದ ಇರಿಡಿಯಮ್ ಲೋಹ ಇದೆ. ಇಂತಹ ಪಾತ್ರೆಗೆ ವಿಶೇಷವಾದ ಶಕ್ತಿ ಇದೆ. ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಕೋಟ್ಯಾಂತರ ರೂಪಾಯಿ ದುಡ್ಡು ಮಾಡಬಹುದು, ಕಡಿಮೆ ಬೆಲೆ ನಿಮಗೆ ಮಾರಾಟ ಮಾಡುತ್ತೇವೆ ಎಂದು ಒಂದಷ್ಟು ಖದೀಮರ ತಂಡ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡುತ್ತಿತ್ತು.

 

Scroll to Top