ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದ ಎರಡೂವರೆ ಹರೆಯದ ರಿಷಿಕ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಮಾ. 09. ತಾಲೂಕಿನ ಹೊಸಪೇಟೆ ಗ್ರಾಮದ ಕವಿತಾ ಮತ್ತು ಹೆಚ್.ಎನ್.ಹರೀಶ್ ದಂಪತಿಯ ಪುತ್ರಿ ಹೆಚ್.ಹೆಚ್.ರಿಷಿಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2022 ರಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ.

ಎರಡೂವರೆ ವರ್ಷದ ಪುಟಾಣಿ ರಿಷಿಕ ವರ್ಷಗಳು, ತಿಂಗಳುಗಳು, ವಾರಗಳು, ಪ್ರಾಣಿ, ಪಕ್ಷಿ ಮತ್ತು ತರಕಾರಿಗಳ ಹೆಸರನ್ನು ಇಂಗ್ಲೀಷ್ ಮತ್ತು ಕನ್ನಡದಲ್ಲಿ ಹೇಳುವ ಮೂಲಕ ರಾಜ್ಯ ಮತ್ತು ದೇಶಕ್ಕೆ ಸಂಬಂಧಿಸಿದ ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರಿಸುವ ಜೊತೆಗೆ ಇಂಗ್ಲೀಷ್ ಮತ್ತು ಕನ್ನಡ ರೈಮ್ಸ್ ಗಳನ್ನು ಹೇಳುವ ಚಿಕ್ಕ ವಯಸ್ಸಿನ ಪೋರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮೆಚ್ಚುಗೆ ವ್ಯಕ್ತಪಡಿಸಿ ಗೌರವಿಸಿದೆ.

Also Read  ದ.ಕ. ಜಿಲ್ಲಾ ಶಾಖೆಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ

error: Content is protected !!
Scroll to Top