(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.09. ಆಧಾರ್ ಕಾರ್ಡ್ ನಮ್ಮಲ್ಲಿರುವ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಅದಿಲ್ಲದೇ ಬಹಳಷ್ಟು ಕೆಲಸ ನಡೆಯೋದೇ ಇಲ್ಲ. ಅಲ್ಲದೇ, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಯಂತಹ ದಾಖಲೆಗಳು ಸಹ ಪ್ರತಿಯೊಬ್ಬರಿಗೂ ಆಧಾರ್ ಜೊತೆಗೆ ಮುಖ್ಯವಾಗಿದೆ.
ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ದೇಶದ ಜನತೆಗೆ ಶುಭ ಸುದ್ದಿ ನೀಡಲು ಹೊರಟಿದ್ದು, ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಪಡಿತರ ಚೀಟಿ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.