ತಮಿಳುನಾಡು: 13 ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ

(ನ್ಯೂಸ್ ಕಡಬ) newskadaba.com ಚೆನ್ನೈ, ಮಾ. 09. ತಮಿಳುನಾಡಿನಲ್ಲಿ ಬಿಜೆಪಿಯ 12ಕ್ಕೂ ಅಧಿಕ ಪದಾಧಿಕಾರಿಗಳು ಎಐಎಡಿಎಂಕೆಗೆ ಸೇರಲು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ನೀಡಲು ನಾಯಕತ್ವದ ಕುರಿತು ಇರುವ ಅಸಮಾಧಾನವೇ ಕಾರಣ ಎಂದು ಅವರು ಹೇಳಿದ್ದಾರೆ.

ಚೆನ್ನೈ ಪಶ್ಚಿಮದಲ್ಲಿರುವ ಬಿಜೆಪಿ ಐಟಿ ಘಟಕಕ್ಕೆ ಸೇರಿದ ಎಲ್ಲಾ 13 ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜೀನಾಮೆ ನೀಡಿದವರಲ್ಲಿ ಪಕ್ಷದ ರಾಜ್ಯ ಐಟಿ ಘಟಕದ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಹಾಗೂ ರಾಜ್ಯ ಕಾರ್ಯದರ್ಶಿ ದಿಲೀಪ್ ಕಣ್ಣನ್ ಸೇರಿದ್ದಾರೆ.

Also Read  ಎರಡು ಜೀವಗಳನ್ನು ಬಲಿ ಪಡೆದ ಬೆನ್ನಲ್ಲೇ ಕೃಷಿಕನನ್ನು ಬೆನ್ನಟ್ಟಿದ ಕಾಡಾನೆ

error: Content is protected !!
Scroll to Top