(ನ್ಯೂಸ್ ಕಡಬ) newskadaba.com ಕಡಬ, ಜ.02. ದಲಿತ್ ಸೇವಾ ಸಮಿತಿ ಕಡಬ ತಾಲೂಕು ಶಾಖಾ ವತಿಯಿಂದ ಜ.1 ರಂದು ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ದಲಿತ ಬಡವರಾದ ಬಾಬು ದುಗ್ಗಮ್ಮ ದಂಪತಿಗಳಿಗೆ ಅಕ್ಕಿ ವಿತರಿಸುವ ಮೂಲಕ ಹೊಸವರ್ಷವನ್ನು ಆಚರಿಸಲಾಯಿತು.
ಕಡಬ ತಾಲೂಕು ಅಧ್ಯಕ್ಷ ಕೇಶವ ಕುಪ್ಲಾಜೆ ಅಕ್ಕಿ ಚೀಲ ಹಸ್ತಾಂತರಿಸಿ ಮಾತನಾಡಿ ಹೊಸವರ್ಷವು ಎಲ್ಲರಿಗೂ ಶುಭವನ್ನು ತರುವುದರೊಂದಿಗೆ ಎಲ್ಲರೂ ಸಂತೋಷಪಡುವಂತಾಗಲಿ ಎಂದು ಶುಭಹಾರೈಸಿದರು. ಬಳಿಕ ಲಲಿತ ನಡುಗುಡ್ಡೆ, ಲತಾ ಪುಂಜಮನೆ, ದಯಾನಂದ ಮುಳಿಮಜಲುರವರಿಗೆ ಅಕ್ಕಿ ಚೀಲ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಅಣ್ಣಿ ಎಲ್ತಿಮಾರ್, ಕಡಬ ತಾಲೂಕು ಉಪಾಧ್ಯಕ್ಷ ಗುರುಪ್ರಸಾದ್ ನೆಲ್ಯಾಡಿ, ಜೊತೆಕಾರ್ಯದರ್ಶಿ ಸುರೇಶ್ ತೋಟಂತಿಲ, ರವಿ ಆಲಂಕಾರು, ಪ್ರಶಾಂತ್ ಆಲಂಕಾರು, ಬಾಬು ಮರುವಂತಿಲ, ತನಿಯಪ್ಪ ಬುಡೇರಿಯಾ ಉಪಸ್ಥಿತರಿದ್ದರು.